ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಕ್ಕೆ ಭರ್ಜರಿ ತಯಾರಿ ನಡೆದಿದೆ. ಇಂದು ಅರಮನೆ ಒಳಾವರಣದಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯುತ್ತದ್ದು, ಬೆಳಗ್ಗೆಯಿಂದ 7.15 ರಿಂದ ನವಗ್ರಹ ಹೋಮ ಮತ್ತು ಇತರೆ ಶಾಂತಿ ಪೂಜೆ ಕಾರ್ಯ, ಬೆಳಗ್ಗೆ 10.05ರಿಂದ 10.35ರವರೆಗೆ ಸಿಂಹಾಸನ ಜೋಡಣಾ ಕಾರ್ಯ, ಮತ್ತು ಬೆಳಗ್ಗೆ 11ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅಶ್ವಕ್ಕೆ ಪೂಜೆ ನಡೆಯುತ್ತದೆ.
ಮೈಸೂರು ಅರಮನೆ ಖಜಾನೆಯಲ್ಲಿರುವ ರತ್ನಖಚಿತ ಸಿಂಹಾಸನ, ಮುತ್ತು, ರತ್ನ, ಪಚ್ಚೆ ಸೇರಿ ಅಮೂಲ್ಯ ಆಭರಣಗಳನ್ನು ಒಳಗೊಂಡಿರುವ ಸಿಂಹಾಸನದ ಬಿಡಿ ಭಾಗಗಳು ಇಂದು ದರ್ಬಾರ್ ಹಾಲ್‌ಗೆ ರವಾನೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ.