ಬೆಂಗಳೂರು : ಉಡುಪಿಯ ವಿದ್ಯಾರ್ಥಿನಿಯರು ವಿಡಿಯೋ ಚಿತ್ರಿಕರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿ, ಗೃಹ ಇಲಾಖೆ ಕ್ರಮ ನೋಡಿದರೆ ಸರ್ಕಾರ ಬದುಕಿದೆಯಾ ಇಲ್ಲವಾ ಎನ್ನುವ ಅನುಮಾನ ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಇದು ಕೋಮುವಾದಿ ಸರ್ಕಾರ, ಜಿಹಾದಿ ಸರ್ಕಾರ ಎನ್ನುವುದಕ್ಕೆ ಉಡುಪಿ ಘಟನೆ ನಿದರ್ಶನವಾಗಿದೆ. ವಿದ್ಯಾರ್ಥಿನಿಯರ ಮೇಲೆ ಪ್ರಕರಣ ದಾಖಲಿಸದೆ ಘಟನೆಯೇ ಆಗಿಲ್ಲ ಎನ್ನುವ ಮಾಹಿತಿ ನೀಡಿದರು. ತಪ್ಪೊಪ್ಪಿಕೊಂಡಿದ್ದಾರೆ, ವೀಡಿಯೋ ಡಿಲೀಟ್ ಆಗಿದೆ. ವೈರಲ್ ಆಗಿಲ್ಲ, ಸಂತ್ರಸ್ಥೆ ದೂರು ನೀಡಿಲ್ಲ. ಹಾಗಾಗಿ ಪ್ರಕರಣ ದಾಖಲಿಸಿಲ್ಲ ಎನ್ನುವ ನಡೆ ಖಂಡನೀಯವಾಗಿದೆ.
ಈ ಘಟನೆ ಸಂಬಂಧ ಇದು ಹುಡುಗಾಟಿಕೆ, ಮಕ್ಕಳಾಟ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇವರಿಗೆ ಮಾನ ಮರ್ಯಾದೆ ಇದೆಯಾ? ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದೆಯಾ? ಇವರ ನಾಯಕರು ಸೋನಿಯಾ, ಪ್ರಿಯಾಂಕ ಕೂಡ ಹೆಣ್ಣುಮಕ್ಕಳು, ಇವರಿಗೆ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಇದೆಯಾ? ಪ್ರಶ್ನಿಸಿದ್ದಾರೆ ಅಲ್ಲದೇ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರನ್ನು ಬೆದರಿಸಿದ್ದಾರೆ ಈ ಉಡುಪಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸರ್ಕಾರವಾ? ಚುನಾಯಿತ ಸರ್ಕಾರ ನಡೆದುಕೊಳ್ಳುವ ರೀತಿಯಾ ? ಡಿಕ್ಟೇಟರ್ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ,ಪ್ರಕರಣ ಬೆಳಕಿಗೆ ತಂದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಈಗ ಪ್ರತಿರೋಧ ಹೆಚ್ಚಾದ ನಂತರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಇವರ ಮನೆಯ ಮಕ್ಕಳು ಶೌಚಾಲಯಕ್ಕೆ ಹೋದಾಗ ವೀಡಿಯೋ ಮಾಡಿದರೆ ಆಗಲೂ ಸಣ್ಣ ವಿಷಯ ಎನ್ನಲಾಗುತ್ತಾ? ಇಷ್ಟೆಲ್ಲಾ ಆದರೂ ಏನೂ ಆಗಿಲ್ಲ ಎನ್ನುವ ಸರ್ಕಾರವನ್ನು ಗೃಹ ಸಚಿವರ ವಜಾ ಮಾಡಬೇಕು.ಇದು ಜಿಹಾದಿ ಸರ್ಕಾರ, ಯಾರನ್ನು ಬೇಕಾದರೂ ಕೊಲೆ ಮಾಡಿ, ರೇಪ್ ಮಾಡಿ ಎನ್ನುವ ಧೋರಣೆ ತಳೆದಿರುವ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ.
ತಕ್ಷಣ ಪ್ರಕರಣ ಬಯಲಿಗೆಳೆದ ವಿದ್ಯಾರ್ಥಿನಿ ಮೇಲಿನ ದೂರು ವಾಪಸ್ ಪಡೆಯಬೇಕು. ಪ್ರಕರಣ ಸಿಬಿಐ, ಎನ್ಐಎಗೆ ವಹಿಸಬೇಕು. ನಾವು ಈ ಹುಡುಗಿ ವೀಡಿಯೋ ತೆಗೆಯುವ ಉದ್ದೇಶ ಹೊಂದಿರಲಿಲ್ಲ, ಬೇರೆ ಹುಡುಗಿ ವೀಡಿಯೋ ತೆಗೆಯಬೇಕಿತ್ತು ಎಂದುಕೊಂಡಿದ್ದೆವು ಎಂದು ಆರೋಪಿತ ವಿದ್ಯಾರ್ಥಿನಿಯರು ಹೇಳಿದ್ದಾರೆ. ಹಾಗಾಗಿ ಇದು ವ್ಯವಸ್ಥಿತ ಪಿತೂರಿ, ಪೂರ್ವನಿಯೋಜಿತ ಕೃತ್ಯ, ಜಿಹಾದಿ ಮನಸ್ಥಿತಿ ಇದೆ. ಅವರ ಟಾರ್ಗೆಟ್ ಬೇರೆ ಆಗಿದ್ದರು ಹಾಗಾಗಿ ಕೇಸ್ ಸಿಬಿಐಗೆ ವಹಿಸಬೇಕು.