ಬಳ್ಳಾರಿ ; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡಿದ್ದ ಬೆನ್ನಲ್ಲೆ ಬಳ್ಳಾರಿಯಲ್ಲಿ ಬೆಲೆ ಏರಿಕೆ ವಿರುದ್ಧ ವ್ಯಾಪಾರಸ್ಥರು ಅಘೋಷಿತ ಬಂದ್ ಮಾಡಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಯಾದ ಬೆನ್ನಲ್ಲೆ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾಡಿದೆ. ಇದರಿಂದ ಬೇಸತ್ತ ಜನರು ಬಳ್ಳಾರಿಯ ಕಾಳಂಮ್ಮಾ ಸ್ಟ್ರೀಟ್ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗಳಿದಿದ್ದಾರೆ.
ನಗರದ ಬಹುತೇಕ ಮಳಿಗೆಗಳು ಬಂದ್ ಮಾಡಲಾಗಿದೆ. ನಿನ್ನೆಯಷ್ಟೇ ಬೆಸ್ಕಾಂ ಸ್ಪಷ್ಟನೆ ನೀಡಿದ್ದು, ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ದಿಢೀರ್ ಬೆಲೆ ಏರಿಕೆ ಕಂಡು ಜನರು ಬೇಸತ್ತು ಹೋಗಿದ್ದಾರೆ. ಉಚಿತ ವಿದ್ಯುತ್ ನೆಪದಲ್ಲಿ ಗ್ರಾಹಕರ ಬೇಬಿಗೆ ಕತ್ತರಿ ಹಾಕುವಂತಾಗಿದೆ.