ದೇಶದಲ್ಲಿ ದ್ವೇಷ ಹರಡುತ್ತಿರುವವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ (Rajya Sabha) ಖರ್ಗೆ ಪ್ರಧಾನಿಯವರನ್ನು ಮೌನಿ ಬಾಬಾ ಎಂದು ಹೇಳಿದಾಗ ಸಭಾಪತಿ ಜಗದೀಪ್ ಧನ್ಖರ್ , ‘‘ನೀವು ತುಂಬಾ ಹಿರಿಯ ಸದಸ್ಯರು ಸರ್, ಇದು ನಿಮಗೆ ಹಿಡಿಸುವುದಿಲ್ಲ.
If I speak the truth, is it anti-national? I'm not anti-national. I'm more patriotic than anyone here. I'm a 'bhoomi-putra'…You're looting the country& telling me that I'm anti-national: LoP Rajya Sabha Mallikarjun Kharge during debate on Motion of Thanks on President's address pic.twitter.com/RnasKTzYl5
— ANI (@ANI) February 8, 2023
ಈ ರೀತಿ ಪದಗಳನ್ನು ಬಳಸಬೇಡಿ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಮೇಲ್ಮನೆಯಲ್ಲಿ ಗದ್ದಲವುಂಟಾಗಿದೆ.
2014ರಲ್ಲಿ ಪ್ರಧಾನಿ ಮೋದಿ ‘ನಾ ಖಾವೂಂಗಾ ನಾ ಖಾನೇ ದೂಂಗಾ’ ಎಂದು ಹೇಳಿದ್ದರು. ಕೆಲವು ಕೈಗಾರಿಕೋದ್ಯಮಿಗಳನ್ನು ತಿನ್ನಲು ಏಕೆ ಬಿಡುತ್ತಿದ್ದಾರೆ ಎಂದು ಈಗ ನಾನು ಕೇಳಬಯಸುತ್ತೇನೆ. ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. 2014 ರಲ್ಲಿ 2019ರಲ್ಲಿ ₹ 50,000 ಕೋಟಿಯಷ್ಟಿದ್ದರೆ ₹ 1 ಲಕ್ಷ ಕೋಟಿ ಆಯಿತು. ಎರಡು ವರ್ಷಗಳಲ್ಲಿ ಅವರ ಆಸ್ತಿ ₹ 12 ಲಕ್ಷ ಕೋಟಿ ಮುಟ್ಟಿದ್ದು ಯಾವ ಮ್ಯಾಜಿಕ್ ಗೊತ್ತಿಲ್ಲ ಎಂದು ಕುಟುಕಿದ್ರು.
ಖರ್ಗೆ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಂಸದ ಪಿಯೂಷ್ ಗೋಯಲ್, ಖರ್ಗೆ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. “ಅವರು ಯಾವುದೇ ಮಾಹಿತಿ ಇಲ್ಲದ ಉದ್ದೇಶಪೂರ್ವಕ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಷೇರು ಮಾರುಕಟ್ಟೆ ಲೆಕ್ಕಾಚಾರವಾಗಿದೆ. ಅದರಲ್ಲಿ ಸರ್ಕಾರದ ಪಾತ್ರವಿಲ್ಲ” ಎಂದು ಗೋಯಲ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ : –ಗೋಕರ್ಣದಲ್ಲಿ ಹೆಚ್ಡಿಕೆಯನ್ನ ಪ್ರಶ್ನಿಸಿದ ಅರ್ಚಕ- ‘ಬ್ರಾಹ್ಮಣ’ ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ