ಬೆಂಗಳೂರು : ಹುಲಿ ಉಗುರಿನ ಲಾಕೆಟ್ ಧರಿಸಿದ್ದರಿಂದ ಹಳ್ಳಿಕಾರ್ ಸಂತೋಷ್ ಬಂಧನವಾದ ಬೆನ್ನಲ್ಲೆ ಸ್ಯಾಂಡಲ್‌ವುಡ್ ಸೇರಿದಂತೆ ಹಲವರು ಹುಲಿ ಉಗುರಿನ ಲಾಕೆಟ್ ಧರಿಸಿರುವ ಬಗ್ಗೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ವನ್ಯಜೀವಿಗಳ ಸಂರಕ್ಷಣೆಗಾಗಿ ವಾಟಾಳ್ ನಾಗಾರಾಜ್ ಹುಲಿ ವೇಷಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನ ಮುಂಭಾಗ ವನ್ಯಜೀವಿಗಳ ಸಂರಕ್ಷಣೆಗಾಗಿ ವಾಟಾಳ್ ನಾಗರಾಜ್ ಮಾಧ್ಯಮದೊಂದಿಗೆ ಮಾತನಾಡಿ, ಈ ಘಟನೆ ಸಂಬಂಧಿಸಿ ಅರಣ್ಯ ಇಲಾಖೆ ಎಚ್ಚೆತುಕೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ.
ನಿರಂತರವಾಗಿ ವನ್ಯ ಪ್ರಾಣಿಗಳ ಮೇಲೆ ದಾಳಿ ನಡಿತಿದೆ. ವನ್ಯ ಜೀವಿಮೇಲಿನ ದಾಳಿ ತಡೆಯುವಲ್ಲಿ ಇಲಾಖೆ ವಿಫಲವಾಗಿದೆ. ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿ ಗಳಿ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಹುಲಿ ಆನೆ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಡು ಹೆಚ್ಚಿನಪ್ರಮಾಣದಲ್ಲಿ ಒತ್ತುವರಿಯಾಗಿದೆ. ಬನ್ನೇರುಘಟ್ಟದಲ್ಲಿಯೂ ಒತ್ತುವರಿ ಯಾಗಿದೆ. ಪ್ರಾಣಿಗಳಿಗೆ ಜಾಗ ಕಡಿಮೆಯಾಗಿದೆ. ಹೀಗಾಗಿಯೇ ಪ್ರಾಣಿಗಳು ನಾಡಿಗೆ ಬರ್ತಿದೆ. ಕಳೆದ ಬಾರಿ ಚಿರತೆ ಬೆಂಗಳೂರಿನ ನಗರಕ್ಕೆ ಬಂದಿತ್ತು. ಮನುಷ್ಯ ರ ಮಳೆ ದಾಳಿಯಾದ ಪ್ರಕರಣ ಬೆಳಕಿಗೆ ಬಂದಿತ್ತು ಅರಣ್ಯವನ್ನ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಾಣ ಮಾಡಲಾಗ್ತಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೇರೆ ದೇಶದಿಂದ ಚೀತಾವನ್ನ ಪ್ರಧಾನಿ ನಮ್ಮ ದೇಶಕ್ಕೆ ತಂದಿದ್ರು 6 ಚೀತಾ ಸತ್ತು ಹೋಗಿದೆ. ಇದಕ್ಕೆ ಅರಣ್ಯ ಇಲಾಖೆಯೇ ಕಾರಣ, ಅರಣ್ಯ ಇಲಖೆಯ ಕಾನೂನಿಗೆ ಭದ್ರವಾಗಬೇಕಿದೆ. ಕಾಡಿನಲ್ಲಿ ಮರಗಳ್ಳರ ಸಂಖ್ಯೆ ಹೆಚ್ಚಾಗಿದೆ
ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೋಳ್ಳಬೇಕಿದೆ.
ಹುಲಿ ಉಗುರು ಅಷ್ಟೇ ಅಲ್ಲಾ ಅರಣ್ಯದಲ್ಲಿ ಸಾಕಷ್ಟು ನಾಶಗಳಾಗ್ತಿದೆ. ಹುಲಿ ಉಗುರನ್ನ ಹಾಕಿಕೊಳ್ಳುವ ಪ್ರವೃತ್ತಿ ಒಳ್ಳೆಯದಲ್ಲ. ಹುಲಿ ಸಾಯಿಸಿಯೇ ಉಗುರನ್ನ ತೆಗೆದು ಕೊಳ್ಳಲಾಗುತ್ತೆ ಈ ವಿಚಾರದಲ್ಲಿ ಉನ್ನತಮಟ್ಟದ ತನಿಖೆ ಯಾಗಬೇಕು ಹುಲಿ ಉಗುರಿನ ಮೂಲವನ್ನ ಪತ್ತೆ ಹಚ್ಚಬೇಕು ಪ್ರಕರಣ ಸಂಪೂರ್ಣ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು.
ಹುಲಿಉಗುರು ಧರಿಸಿರುವವರ ಸಂಖ್ಯೆ ಬಹಳಷ್ಟಿದೆ. ಯಾರೋ ಒಬ್ವರನ್ನ ಬಂದಿಸೊದಲ್ಲ. ಉನ್ನತ ಮಟ್ಟದ ತನಿಖೆಯಾಗಿ ಶಿಕ್ಷೆ ವಿಧಿಸಬೇಕುಪ್ರಕರಣ ಬೆಳಕಿಗೆ ಬಂದ ಮೇಲೆ ಅಸಹಾಯರನ್ನಷ್ಟೇ ಬಂಧನ ಮಾಡಲಾಗ್ತಿದೆ ಅದರಲ್ಲೂ ಇಬ್ಬರು ಪೂಜಾರಿಯನ್ನ ಇಂದು ಬಂಧನ ಮಾಡಿದ್ದಾರೆ. ಆರೋಪಿಗಳು ಹುಲಿ ಉಗುರನ್ನ ಬದಲಾಯಿಸಿ ಡುಪ್ಲಿಕೇಟ್ ಎನ್ನುತ್ತಿದ್ದಾರೆ. ಅರಣ್ಯ ಇಲಾಖೆ ಆರೋಪಿಗಳು ತಪ್ಪಿಸಿ ಕೊಳ್ಳಲು ಅವಕಾಶ ಕೊಡಬಾರದು. ಅರಣ್ಯ ಇಲಾಖೆಗೆ ಒಂದುವಾರ ಗಡುವು ಕೊಡ್ತೇನೆ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಯಾಗಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.