ಶಿವಮೊಗ್ಗ : ʼ ಸಿಗಂದೂರು ʼ ಎನ್ನುವ ಹೆಸರು ಜಗತ್ಪ್ರಸಿದ್ಧವಾಗಿದ್ದೇ ಇಲ್ಲಿನ ಶ್ರೀ ಚೌಡೇಶ್ವರಿ ಅಮ್ಮನವರ ಕ್ಷೇತ್ರದ ಮಹಿಮೆಯಿಂದ. ದೇವರ ದರ್ಶನಕ್ಕೆ ಪ್ರತಿ ನಿತ್ಯ ಲಕ್ಷಾಂತರ ಜನರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದೀಗ ಸಿಗಂದೂರು ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರು ಗಮನಿಸಲೇ ಬೇಕಾದ ಸುದ್ದಿಯಾಗಿದ್ದು, ಇಂದಿನಿಂದ ಸಿಗಂದೂರು ಲಾಂಚ್ನಲ್ಲಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶ ಬರಿದಾದ ಕಾರಣ ಜೂ.14 ರಿಂದ ಹೊಳೆಬಾಗಿಲಿ-ಸಿಗಂದೂರು ಲಾಂಚ್ನಲ್ಲಿ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಕೇವಲ ಪ್ರಯಾಣಿಕರು ಮಾತ್ರ ಸಂಚಾರಿಸಲು ಅವಕಾಶ ಕಲ್ಪಿಸಲಾಗಿದೆ.
ರಸ್ತೆ ಮಾರ್ಗದ ಮೂಲಕ ವಾಹನದಲ್ಲಿ ಸಿಂಗದೂರಿಗೆ ತೆರಳುವ ಪ್ರವಾಸಿಗರು ಹೊಸನಗರ, ನಗರ, ನಿಟ್ಟೂರು, ತುಮರಿ ರಸ್ತೆಯನ್ನು ಬಳಕೆ ಮಾಡಬಹುದಾಗಿದೆ. ಅಲ್ಲದೇ ವಾಹನ ಮೂಲಕ ಬರುವವರು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಚಾರ ದೃಷ್ಟಿಯಿಂದ ಸ್ಥಳೀಯರ ಸಣ್ಣ ಲಾಂಚ್ ಮತ್ತು ಬೋಟ್ ವ್ಯವಸ್ಥೆ ಮಾಡಲಾಗಿದೆ.