ಬೆಂಗಳೂರು : ಬಿಬಿಎಂಪಿ ಅವರು ಕೋಟಿ ಕೋಟಿ ಖರ್ಚು ಮಾಡಿ ರಸ್ತೆಗಳಿಗೆ ಡಾಂಬರೀಕರಣ ಮಾಡ್ತಾ ಇದ್ದಾರೆ. ಆದರೆ ಜಲ ಮಂಡಳಿಯವರು ರಸ್ತೆಯನ್ನು ಅಗಿತಾ ಇದ್ದಾರೆ. ಹೀಗಾಗಿ ಪಾಲಿಕೆ ರಸ್ತೆ ಆಗಿತ್ತಿರೋರ ವಿರುದ್ಧ ಇದೀಗ ಕ್ರಮ ಕೈಗೊಳ್ಳುವುದಕ್ಕೆ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿದೆ ಒಂದು ದಿಕ್ ಆದ್ರೆ ಜಲ ಮಂಡಳಿಯ ಎದ್ದೆ ಇನ್ನೊಂದು ದಿಕ್ಕು. ಮೊದಲೇ ಬೆಂಗಳೂರಿನ ರಸ್ತೆಗಳು ಹಾಳಾಗಿ ಹೋಗಿದ್ದು, ವಾಹನ ಸವಾರು ಓಡಾಡಕ್ಕೆ ಸಮಸ್ಯೆ ಆಗ್ತಾಯಿದೆ ಅಂತ ಬೈಕೊಂಡು ಓಡಾಡ್ತಾ ಇದ್ದಾರೆ. ಇದರ ಮಧ್ಯ ಜಲ ಮಂಡಳಿ ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳನ್ನೇ ಅಗಿತಾ ಇದೆ. ಹೀಗಾಗಿ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಅನುಮತಿ ಇಲ್ಲದೆ ಯಾವುದೇ ರಸ್ತೆಗಳನ್ನು ಅಗಿಯುವ ಹಾಗಿಲ್ಲ ರಸ್ತೆಅಗಿದು ಯಾವುದೇ ರೀತಿಯಾದ ಕೇಬಲ್ ಗಳನ್ನ ಹಾಕೋಹಾಗಿಲ್ಲ ಎಂದು ಬಿಬಿಎಂಪಿ ಆದೇಶ ನೀಡಿದೆ. ಆದರೆ ಜಲಮಂಡಳಿ ಒಂದುವಾರದ ಹಿಂದೆ ಅಷ್ಟೇ ನಗರದಲ್ಲಿ ಡಾಂಬರೀಕರಣ ಮಾಡಿದ ರಸ್ತೆಗಳನ್ನು ಅಗಿದು ಹಾಳು ಮಾಡಿದೆ. ಹಾಗಿದ್ದರೆ ರಸ್ತೆ ಪರಿಸ್ಥಿತಿ ಹೇಗಿದೆ ನೀವೇ ನೋಡಿ…
ಇನ್ನು ರಸ್ತೆ ಅಗಿತಾಯಿರುವಂತ ಜಲ ಮಂಡಳಿ ವಿರುದ್ಧ ಬಿಬಿಎಂಪಿ ಅಸಮಾಧಾನ ಹೊರ ಹಾಕಿದೆ. ಜಲ ಮಂಡಳಿ ವಿರುದ್ಧ ದೂರು ನೀಡುವುದಾಗಿ ಬಿಬಿಎಂಪಿ ಮುಂದಾಗಿದ್ದು, ರಸ್ತೆಗಳನ್ನ ಆಗಿದ್ದು ಕಾಮಗಾರಿ ಮಾಡಿದ ಎಲ್ಲಾ ಏಜೆನ್ಸಿಗಳಿಗೂ ನಾವು ಸರಿಪಡಿಸುವುದಕ್ಕೆ ಡೆಡ್ ಲೈನ್ ಅನ್ನ ಕೊಡ್ತೇವೆ. ಆಬಳಿಕೆ ಕೆಲಸ ಮಾಡದೆ ಇದ್ರೆ ಅಂತವರು ವಿರುದ್ಧ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳುತ್ತವೆ ಅಂತ ಬಿಬಿಎಂಪಿ ಆಯುಕ್ತ ತುಶಾರ್ ಗಿರೀನಾಥ್ ನಾಥ್ ಹೇಳಿದ್ದಾರೆ.
ಒಟ್ನಲ್ಲಿ ಕೋಟಿ ಕೋಟಿ ಸುರಿದು ರಸ್ತೆಗಳನ್ನು ನಿರ್ಮಾಣ ಮಾಡಲಾಗ್ತಾಇದ್ದು ಜಲ ಮಂಡಳಿ ಅಗಿತಾಇದೆ. ಬಿಬಿಎಂಪಿ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳ್ತಾ ಇದೆ ಆದರೆ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದು ಕಾದು ನೋಡಬೇಕಾಗಿದೆ.
ವರದಿ : ಮಂಜುನಾಥ್