ಬೆಂಗಳೂರು : ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ಮೂರು ರಾಜ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಧವಳಗಿರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾಧ್ಯಮದೊಂದಿಗೆ ಮಾತನಾಡಿ, ನಾಲ್ಕು ರಾಜ್ಯಳ ಪೈಕಿ ಮೂರು ರಾಜ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ. ಈ ಎಲ್ಲಾ ಗೆಲುವಿಗೆ ಮೋದಿ , ನಡ್ಡಾ, ಅಮಿತ್ ಶಾ ಕಾರಣ. ಬೇರೆ ಯಾವುದೆ ಪಕ್ಷದಲ್ಲಿ ದೇಶವನ್ನು ಆಳುವ ಸಾಮರ್ಥ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸೀಟ್ ಗೆಲ್ತೀವಿ.. ನಾನು ಪ್ರವಾಸ ಮಾಡ್ತೀನಿ.. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇನ್ನಷ್ಟು ಬಲ ಬಂದಿದೆ. ಕಾಂಗ್ರೆಸ್ ನ ಧೂಳಿಪಟ ಮಾಡಲಿಕ್ಕೆ ರೆಡಿಯಾಗಿದ್ದೀವಿ.ಲೋಕಾಸಭೆಗೆ ಇದೊಂದು ದೊಡ್ಡ ಉದಾಹರಣೆ.. ಎಲ್ಲಾ ನಾಯಕರಿಗು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.