ಬೆಂಗಳೂರು : ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಹೇಳಿಕೆ ವಿಚಾರ ಬೆಂಗಳೂರಿನಲ್ಲಿ ಶಾಸಕ ಆರ್. ಅಶೋಕ್ (MLA R. Ashok) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಏನೇ ಮಾಡಿದರೂ ಮೊದಲು ಬ್ಯುಸಿನೆಸ್ ಇರುತ್ತದೆ, ನಂತರ ಹವ್ಯಾಸ ಇರುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಏನು ಅಂತಾ ತಿಳಿಯಲು ಬಯಸುತ್ತೇನೆ ಎಂದಿದ್ದಾರೆ.
ಹದಿನೈದು ವರ್ಷಗಳ ಹಿಂದೆ 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿಯೇ ಇನ್ನೂ 30% ಅಭಿವೃದ್ಧಿ ಮಾಡಲು ಆಗಿಲ್ಲ. ಕನಕಪುರ ಸೇರಿಸಿದರೆ ರಾಮನಗರ, ದೇವನಹಳ್ಳಿ, ಹೊಸಕೋಟೆ ಕಥೆ ಏನು? ಮುಂದೆ ಸಿಡಿಪಿಯಲ್ಲಿ ಇದೆಲ್ಲವನ್ನೂ ಸೇರಿಸಿಕೊಂಡು ಬಿಟ್ಟರೆ ಹೇಗೆ ಬೇಕೋ ಅವರು ಹಾಗೆ ಮಾಡಿಕೊಳ್ಳಬಹುದು. ಹಿಂದೆ ತುಘಲಕ್ ಅಂತಾ ರಾಜ ಇದ್ದ. ಕನಕಪುರಕ್ಕಿಂತ ಬಹಳ ಹತ್ತಿರ ಇರುವುದು ಹೊಸೂರು, ಹೊಸೂರನ್ನೂ ಸೇರಿಸಿಕೊಂಡು ಬಿಡಿ. ಸ್ಟಾಲಿನ್ ಹತ್ರ ಮಾತಾಡಿ ಬೆಂಗಳೂರನ್ನು ಹಾಳು ಮಾಡಲು ಏನು ಮಾಡಬೇಕೋ ಎಲ್ಲಾ ಮಾಡಿ. ಹಿಂದೆ ಅಧಿಕಾರದಲ್ಲಿದ್ದಾಗ ಏನು ಮಾಡಬೇಕೋ ಅದನ್ನು ಮಾಡಲು ಯೋಗ್ಯತೆ ಇರಲಿಲ್ಲ. ರಿಪಬ್ಲಿಕ್ ಆಫ್ ಕನಕಪುರವನ್ನು ಇಲ್ಲಿಗೆ ತಂದುಬಿಟ್ಟರೆ ಬೆಂಗಳೂರು ಜನರ ಪಾಡೇನು? ನಾವು ನೋಡಿದ ಬೆಂಗಳೂರನ್ನು ಅವ್ಯವಸ್ಥೆಯ ಆಗರ ಮಾಡಲು ನಾವು ಬಿಡಲ್ಲ. ನಮ್ಮ ಪಕ್ಷದ ನಿಲುವು ಕೂಡಾ ಅದೇ ಆಗಿದೆ ಎಂದಿದ್ದಾರೆ
ರಿಯಲ್ ಎಸ್ಟೇಟ್ ದಂಧೆ ಮಾಡಲು ಅವಕಾಶ ಆಗುತ್ತದೆ. ಬೆಂಗಳೂರನ್ನು ನರಕ ಮಾಡಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಇವರೆಲ್ಲಾ ತುಘಲಕ್..! ಮೊನ್ನೆ ಪಾಕಿಸ್ತಾನದ ಮ್ಯಾಚ್ ಗೆ ಹೋಗಿ ಸಿಎಂ, ಡಿಸಿಎಂ ಚಪ್ಪಾಳೆ ಹೊಡೆದುಕೊಂಡು ಕೂತಿದ್ರಲ್ಲಾ? ಇಂಡಿಯಾ ಮ್ಯಾಚ್ ಇದ್ದಾಗ ಯಾಕೆ ಹೋಗಲಿಲ್ಲ? ಸರ್ಕಾರವೇ ಫ್ಲೈಟ್ ಚಾರ್ಜ್ ಕೊಡುತ್ತಿತ್ತಲ್ವಾ? ತುಘಲಕ್, ಟಿಪ್ಪು ಅಂದರೆ ಇವರಿಗೆ ಪ್ರೀತಿ. ಕೇಸರಿ ಟೋಪಿ ಕೊಟ್ಟರೆ ಹಾಕಿಕೊಳ್ಳಲ್ಲಬೇರೆ ಟೋಪಿ ಆದರೆ ಇವರೇ ಎತ್ತಿ ತೆಗೆದುಕೊಂಡು ಹಾಕಿಕೊಳ್ಳುತ್ತಾರೆ.
ಯಾರೋ ಒಬ್ಬರ ತೆವಲಿಗೋಸ್ಕರ ಬೆಂಗಳೂರು ಹಾಳು ಮಾಡುವುದರ ವಿರುದ್ಧ ಬಿಜೆಪಿ ನಿಲುವು ಇದೆ. ಸಿದ್ದರಾಮಯ್ಯ ಸಿಎಂ ಅಂತಾನೇ ಗೊತ್ತಿಲ್ಲ. ಪ್ರಮಾಣ ವಚನ ತೆಗೆದುಕೊಂಡ ಬಳಿಕ ಸಿಎಂ ಅವರನ್ನು ನೋಡಿಯೇ ಇಲ್ಲ. ಈಗ ನಾನೇ ಸಿಎಂ ಅಂತಾ ಸಿದ್ಧರಾಮಯ್ಯ ಹೇಳಿಕೊಳ್ಳಬೇಕಾಗಿದೆ ಎಂದಿದ್ದಾರೆ.