ಬೆಂಗಳೂರು : ಮ್ಯೂಸಿಯಂ, ನೆಹರೂ ತಾರಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ (Home Minister G Parameshwara) ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದೊಂದಿಗೆ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಈ ಹಿಂದೆ 35 ಶಾಲೆಗಳಿಗೆ ಬೆದರಿಕೆ ಬಂದಿತ್ತು. ಇದರ ಬಗ್ಗೆ ಇಂಟರ್‌ಪೋಲ್‌ಗೆ ಮಾಹಿತಿ ಕೊಟ್ಟಿದ್ದೇವೆ, ಅದರ ಬಗ್ಗೆ ತನಿಖೆ ನಡೀತಿದೆ. ಬೆದರಿಕೆ ಮಾಡಿರೋರು ಎಲ್ಲ ಎಚ್ಚರಿಕೆಯಿಂದಲೇ ಮಾಡಿರ್ತಾರೆ. ಐಪಿ ವಿಳಾಸ ಸಿಗಬಾರದು ಅಂತ ಗೊಂದಲ ಮೂಡಿಸಿರ್ತಾರೆ. ಈಗ ನಿನ್ನೆ ಮ್ಯೂಸಿಯಂಗಳಿಗೆ, ಗ್ಯಾಲರಿಗಳಿಗೆ ಬಾಂಬ್ ಬೆದರಿಕೆ ಬಂದಿದೆ. ದೇಶಾದ್ಯಂತ ಈಮೇಲ್ ಮೂಲಕ ಮ್ಯೂಸಿಯಂಗಳಿಗೆ ಬೆದರಿಕೆ ಕರೆ ಬಂದಿದೆ. ನಮ್ಮಲ್ಲೂ ವಿಶ್ವೇಶ್ವರಯ್ಯ ಗ್ಯಾಲರಿ ಸೇರಿ ಮೂರು ನಾಲ್ಕು ಕಡೆ ಬೆದರಿಕೆ ಬಂದಿದೆ. ಐಪಿ ವಿಳಾಸ ಏನೋ ಬಂದಿದೆ, ಅಲ್ಲಿಗೆ ನಮ್ಮದೊಂದು ತಂಡ ಹೋಗಿದೆ. ಇದರ ಬಗ್ಗೆ ಪರಿಶೀಲನೆ ಮಾಡ್ತಿದ್ದೇವೆ. ಬೆದರಿಕೆ ನಿಜವಾದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.