ಬೆಂಗಳೂರು : ನಾಳೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ 4 ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬರುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಲ್ಲ ರಾಜ್ಯಗಳಲ್ಲೂ ಚುನಾವಣೆ ಚೆನ್ನಾಗಿ ಆಗಿದೆ. ನಮಗೆ ಬಂದಿರುವ ಫೀಡ್ ಬ್ಯಾಕ್ ಪ್ರಕಾರ ನಮಗೆ ನಾಲ್ಕು ರಾಜ್ಯಗಳಲ್ಲಿ ಜಯ ಸಿಗುತ್ತೆ, ಮಿಜೋರಾಂನಲ್ಲಿ ಅತಂತ್ರ ಆಗಬಹುದು. ಅದಕ್ಕಾಗಿ ನಾವು ಏನು ಊಹಿಸಿದ್ದೇವೋ ಅದರಂತೆ ಫಲಿತಾಂಶ ಬರಲಿದೆ. ನಮಗೆ ಬಹುಮತ ಬರಲಿದೆ. ಆಯಾಯಾ ರಾಜ್ಯಗಳ ನಾಯಕರ ಜತೆ ಮಾತಾಡಿದ್ದೇನೆ. ಕಮಲ್ ನಾಥ್ ಜತೆಗೆ ಮಾತಾಡಿದ್ದೇನೆ, ವಿಪಕ್ಷ ನಾಯಕರುಗಳ ಜೊತೆ ಝೂಂ ಮೀಟಿಂಗ್ ಮಾಡಿ ಮಾತನಾಡಿದ್ದೇವೆ. ಎಲ್ಲ ಕಡೆಯೂ ನಮಗೆ ಬಹುಮತ ಬರುತ್ತೆ ಅಂದಿದ್ದಾರೆ. ನಮ್ಮವರೆಲ್ಲಾ ತುಂಬಾ ಆತ್ಮವಿಶ್ವಾಸದಲ್ಲಿದ್ದಾರೆ ಎಂದಿದ್ದಾರೆ.