Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಡಾ.ಯತೀಂದ್ರ ಪರ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದೇನು ?

ಬೆಂಗಳೂರು : ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಅವರಿಗೆ ಸಿಎಂ ಸಿದ್ದರಾಮಯ್ಯಪುತ್ರ ಯತೀಂದ್ರ ಅವರು ಮೊಬೈಲ್‌ನಲ್ಲಿ ” ನಾನು ನೀಡಿದ ಲಿಸ್ಟ್​​ನದ್ದು ಮಾತ್ರ ಮಾಡಿ” ಎಂಬ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರ ವೀಡಿಯೋ ವೈರಲ್ ಆಗಿದೆ ಅದನ್ನ ಇಡೀ ರಾಜ್ಯದ ಜನ ನೋಡ್ತಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಅವರು. ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಎಲ್ಲಾ ಸಿಎಂ ಕುಟುಂಬದ ಮೇಲೆ ಆರೋಪ ಮಾಡಿದ್ರು. ಯಡಿಯೂರಪ್ಪ, ಬೊಮ್ಮಾಯಿ, ಹಿಂದೆ ಕುಮಾರಸ್ವಾಮಿ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರ ಮಕ್ಕಳೆಲ್ಲಾ ಸೇರಿ ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಅಂತ‌ ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ಸಿದ್ದರಾಮಯ್ಯ ಹಿಂದೆ ಈ ಪರೀ ಸುಳ್ಳುಗಾರ ಆಗಿರಲಿಲ್ಲ. ಕಾಂಗ್ರೆಸ್‌ಗೆ ಸೇರಿದ ಮೇಲೆ ಬಹಳ ಬದಲಾವಣೆ ಆಗಿದ್ದಾರೆ.

ಸಿಎಂ ಸಿದ್ದರಾಮಯ್ಯಪುತ್ರ ಯತೀಂದ್ರ ಟ್ರಾನ್ಸ್‌ಫರ್ ದಂಧೆ ಮಾಡಿಲ್ಲ. ಅದನ್ನ ಪ್ರೂವ್ ಮಾಡಿದ್ರೆ ರಾಜಕೀಯದಿಂದ ನಿವೃತ್ತಿ ಆಗ್ತೀನಿ, ಯತೀಂದ್ರ ಸಿದ್ದರಾಮಯ್ಯ ಟ್ರಾನ್ಸ್‌ಫರ್ ಅಲ್ಲ, ಶಾಲೆ ವಿಚಾರವಾಗಿ ಚರ್ಚೆ ಮಾಡಿದ್ರು ಅಂತ ಹೇಳಿಕೆ ನೀಡಿದ್ದಾರೆ ನಾನು ಕೇಳ್ತೀನಿ ವಿವೇಕಾನಂದ ಅಂದ್ರೆ ಯಾರು.? ಮಹದೇವಗೆ ಫೋನ್ ಮಾಡಿ ನಾನು ಹೇಳಿದ್ದು ಯಾಕೆ ಮಾಡಲಿಲ್ಲ ಅಂತ ಕೇಳಿದ್ದಾರೆ. ಇದನ್ನ ಪ್ರೂವ್ ಮಾಡೋದಾದ್ರೆ ಅಂದ್ರೆ, ಇದಕ್ಕಿಂತ ಸಾಕ್ಷಿ ಬೇಕಾ.? ಶಾಲೆಗಳನ್ನ ಜೀರ್ಣೋದ್ಧಾರ ಮಾಡೋದ್ರೆ ಹೀಗೆ ಯಾಕೆ ಹೇಳಬೇಕಿತ್ತು.

ಯತೀಂದ್ರ ಅವರು ನಿಮ್ಮನ್ನ, ಸೆಕ್ರೆಟರಿ ಮಹದೇವ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ‌ಆಡಳಿತ ಅವಧಿಯಲ್ಲಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಜನರಲ್ ಅಟಾರ್ನಿ ಆಗಿದ್ದು, ನಿಮ್ಮ ಎಲ್ಲಾ ನಿರ್ಧಾರ ಅವರು ತೆಗೆದುಕೊಳ್ತಿದ್ದಾರೆ. ನೀವು ಪ್ರಮಾಣ ಮಾಡಿರೋ ವ್ಯತಿರಿಕ್ತವಾಗಿ ನಡೆದುಕೊಳ್ತಿದ್ದಾರೆ. ಇಪ್ಪತ್ತು ವರ್ಷದ ಹಳೆಯ ಸಿದ್ದರಾಮಯ್ಯ ಆದ್ರೆ ಕೂಡಲೇ ರಾಜೀನಾಮೆ ಕೊಡ್ತಾರೆ. ಹೊಸ ಸಿದ್ದರಾಮಯ್ಯ ಆದ್ರೆ ಇದೇ ಹಠಮಾರಿತನ ತೋರ್ತಾರೆ. ಕೂಡಲೇ ರಾಜೀನಾಮೆ ಕೊಡುವಂತೆ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!