ಬೆಂಗಳೂರು : ಬೆಂಗಳೂರು ವ್ಯಾಪ್ತಿಗೆ ಕನಕಪುರ ತಾಲೂಕನ್ನು ಸೇರಿಸುವ ಬಗ್ಗೆ ಡಿಸಿಎಂ ಡಿಕೆಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಸುರೇಶ್ ಕುಮಾರ್.ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಡಿಸಿಎಂ ಡಿಕೆಶಿವಕುಮಾರ್ ಒಂದು ಚಿಂತನೆ ಹೊರಬಿಟ್ಟಿದ್ದಾರೆ. ಸಿಎಂ ಹಾಗೂ ಸಚಿವ ಸಂಪುಟ ಎಷ್ಟರ ಮಟ್ಟಿಗೆ ಒಪ್ಪಿಕೊಳ್ತಾರಾ ನೋಡಬೇಕು ಎಂದಿದ್ದಾರೆ. ಅಲ್ಲದೇಇದು ರಾಮನಗರ ಜಿಲ್ಲೆಯ ರಾಜಕೀಯ. ರಾಜ್ಯ ಸರ್ಕಾರ ಇದರ ಬಗ್ಗೆ ಒಂದು ನಿಲುವು ಪ್ರಕಟಿಸ್ತಾರಾ.? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವ ವಿಚಾರ ಬಾಲಕೃಷ್ಣ ಅವರು ಕುಮಾರಸ್ವಾಮಿ ಜೊತೆ ಇದ್ದಾಗ ಒಪ್ಪಿಕೊಂಡಿರಲಿಲ್ಲಾ ಡಿಕೆಶಿವಕುಮಾರ್ ಜೊತೆ ಇದ್ದಾಗ ಒಪ್ಪಿಕೊಂಡಿರಬಹುದು ಈ ವಿಚಾರಕ್ಕೆ ಒಬ್ಬೊಬ್ಬರದ್ದು ಒಂದು ಚಿಂತನೆ ಇದೆ ಬೆಂಗಳೂರು ಎಷ್ಟು ದೊಡ್ಡದಿದೆ ಅನ್ನೋದು ಗೊತ್ತಿದೆ ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿ ,ಆಮೇಲೆ ನೋಡೋಣಾ ಎಂದಿದ್ದಾರೆ.