ಮೈಸೂರು: ಕೆಲ ದಿನಗಳಿಂದ ಕೇಂದ್ರ ಸಚಿವರಾಗಿದ್ದ ದಿ. ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಇದಗ ಸ್ವತಃ ತೇಜಸ್ವಿನಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ(BJP)ಯಲ್ಲಿದ್ದೇನೆ . ಅನಂತ್ ಕುಮಾರ್ ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿ(BJP). ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಪಕ್ಷದ ಜೊತೆ ಸದಾ ಇದ್ದವರು. ಸೈದ್ಧಾಂತಿಕವಾಗಿ ನಾನು ಬಿಜೆಪಿ ಸಿದ್ಧಾಂತ ಜೊತೆ ಬದ್ಧವಾಗಿದ್ದೇನೆ. ಅನಂತ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ಸೂಕ್ತವಾದ ವಿರೋಧ ಪಕ್ಷದ ನಾಯಕ ಆಯ್ಕೆಯಾಗುತ್ತಾರೆ, ಕಾದು ನೋಡಿ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯಾರೋ ಏನೋ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳ ಮೂಲಕ ನಾವು ಹೇಳಿದ ವಿಷಯ ಒಂದಾದ್ರೆ, ಅದು ಗುರಿ ತಲುಪುವ ವೇಳೆಗೆ ಬೇರೆ ವಿಷಯ ಬದಲಾಗಿರುತ್ತೆ. ನಾನು ಪಕ್ಷದ ಜೊತೆ ಇದ್ದೇನೆ, ಪಕ್ಷನು ಕೂಡ ನನ್ನ ಜೊತೆ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಊಹಾಪೋಹಕ್ಕೆ ತೆರೆಎಳೆದರು.