ಬೆಂಗಳೂರು : ರಾಜಧಾನಿಯ ಈ ರಸ್ತೆಗಳಲ್ಲಿ ನೀವು ಓಡಾಡಬೆಂಕಂದ್ರೆ ನಿಮ್ಮ ಗುಂಡಿಗೆ ಗಟ್ಟಿಯಿರಬೇಕು. ಯಾಕಂದ್ರೆ ಮಾಯಾನಗರಿಯ ರಸ್ತೆಗಳಲ್ಲಿ ರಸ್ತೆಯೇ ಮಾಯವಾಗಿ ಬಿಟ್ಟಿದೆ. ಗುಂಡಿಯಲ್ಲಿ ರಸ್ತೆ ಇದೆಯೋ ರಸ್ತೆಯಲ್ಲಿ ಗುಂಡಿ ಇದೆಯೋ ಅನ್ನೋದೇ ತಿಳಿಯುತ್ತಿಲ್ಲ. ಈ ಕುರಿತಾಗಿ ರಾಜ್ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದೆ ನೋಡಿಕೊಂಡ ಬನ್ನಿ…
ಒಂದ್ಕಡೆ ಯಮಸ್ವರೂಪಿಯಂತೆ ಬಾಯ್ತೆರೆದು ಕುಳಿತ ಗುಂಡಿಗಳ ದೃಶ್ಯ.. ಮತ್ತೊಂದ್ಕಡೆ ನಾಡು ರಸ್ತೆಯಲ್ಲೇ ಬಲಿಗಾಗಿ ತಲೆ ಎತ್ತಿರುವ ಕಬ್ಬಿಣದ ರಾಡ್ ಗಳ ದೃಶ್ಯ.. ಎಸ್ ಸಿಲಿಕಾನ್ ಸಿಟಿಯಲ್ಲಿ ಗುಂಡಿಗಳದ್ದೇ ಕಾರುಬಾರು ಆಗೋಗಿದೆ. ರಸ್ತೆಗಳು ಕಿತ್ತುಹೋಗಿವೆ. ಕಾಂಕ್ರೀಟ್ ರಸ್ತೆಗಳಲ್ಲಿ ಕಾಂಕ್ರೀಟ್ ಮಾಯವಾಗಿ ಹೋಗಿದೆ. ಬಲಿಗಾಗಿ ರಾಡ್ ಗಳು ತಲೆ ಎತ್ತಿದ್ದು, ವಾಹನ ಸವಾರರಿಗೇ ಸವಾಲು ಹಾಕುತ್ತಿವೆ. ಅದೆಷ್ಟೋ ಮಂದಿ ರಸ್ತೆ ಗುಂಡಿಗಳಲ್ಲಿ ಎದ್ದೋ ಬಿದ್ದು ಓಡಾಡ್ತಾಯಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಕೆರೆಗಳಂತಾಗಿ ಹೋಗ್ತವೆ.
ಹೌದು ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ಸದ್ಯ 11,366 ರಸ್ತೆ ಗುಂಡಿಗಳು ಇವೆ ಎಂದು ಬಿಬಿಎಂಪಿ ಅಂಕಿ ಅಂಶಗಳು ತಿಳಿಸಿವೆ. 2023ರ ನವೆಂಬರ್ ತಿಂಗಳ ಒಳಗೆ ಬೆಂಗಳೂರಿನಲ್ಲಿ ಇರುವ ಶೇ. 90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಭರದ ಕಾರ್ಯಾಚರಣೆ ಏನೋ ನಡೆಸಲಾಗುತ್ತಿದೆ. ಆದ್ರೆ ಬೆಂಗಳೂರಿನಲ್ಲಿ ಮಳೆಯ ಕಾರಣದಿಂದಾಗಿ ರಸ್ತೆ ಗುಂಡಿಗಳ ಮಾರಣ ಹೋಮಕ್ಕೆ ಮುಹೂರ್ತವೇ ಸಿಗುತ್ತಿಲ್ಲ. ಮಳೆ ಬಿಟ್ಟೂ ಬಿಡದೆ ಸುರಿಯುವ ಕಾರಣದಿಂದಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗ್ತಿಲ್ಲ ಅನ್ನೋದು ಬಿಬಿಎಂಪಿ ವಾದವೋ ನೆಪವೋ ತಿಳಿಯುತ್ತಿಲ್ಲ. ಇದೇ ಕಾರಣಕ್ಕೆ ಬೆಂಗಳೂರು ನಗರ ಗುಂಡಿ ಮುಕ್ತ ಆಗುತ್ತಿಲ್ಲ ಎಂದು ಬಿಬಿಎಂಪಿ ಪ್ರತಿಬಾರಿ ಹೇಳುತ್ತೆ. ಆದರೆ, ಈ ವರ್ಷ ಬಿಬಿಎಂಪಿ ಮಳೆಯ ನೆಪ ಕೊಡಲು ಸಾಧ್ಯ ಆಗ್ತಿಲ್ಲ. ಏಕೆಂದರೆ, ಈ ವರ್ಷ ಭಾರೀ ಮಳೆ ಕೊರತೆ ಉಂಟಾಗಿದೆ. ಆದರೆ, ರಸ್ತೆ ಗುಂಡಿಗಳು ಮಾತ್ರ ಎಲ್ಲೆಡೆ ತಲೆ ಎತ್ತಿವೆ. ಹೀಗಾಗಿ, ಎಚ್ಚೆತ್ತಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆದಿದ್ದಾರೆ. ಆದಾಗ್ಯೂ ಶೇ. 100ರಷ್ಟು ರಸ್ತೆ ಗುಂಡಿ ಮುಚ್ಚುವ ಭರವಸೆಯನ್ನು ಬಿಬಿಎಂಪಿ ನೀಡುತ್ತಿಲ್ಲ. ಬಹುತೇಕ ಎಲ್ಲ ಗುಂಡಿಗಳನ್ನೂ ಮುಚ್ಚುತ್ತೇವೆ ಎಂದಷ್ಟೇ ಹೇಳುತ್ತಿದೆ
ಬೆಂಗಳೂರಿನ ಹಲವೆಡೆ ರಸ್ತೆಗಳಲ್ಲಿ ಗುಂಡಿಗಳು ತಲೆ ಎತ್ತಿವೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಯಶವಂತಪುರ, ಶಿವಾಜಿನಗರ, ಗೊರಗುಂಟೆಪಾಳ್ಯ, ದಾಸರಹಳ್ಳಿ, ಆರ್ ಆರ್ ನಗರ ಸೇರಿ ಹೀಗೆ ಒಂದಾ ಎರಡಾ ಸಿಟಿಯ ಮೂಲೆ ಮೂಲೆಯಲ್ಲೂ ಗುಂಡಿಗಳದ್ದೇ ದರ್ಬಾರ ಆಗೋಗಿದೆ. ದಿನವೂ ವಾಹನ ಸವಾರರು ಓಡಾಡಲು ಹರಸಾಹಸ ಪಡ್ತಾರೆ. ಇನ್ನು ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಒಂದಲ್ಲ ಒಂದು ನೆಪ ಹೇಳುತ್ತಲೇ ಬರುತ್ತಿದ್ದಾರೆ. ಗುಂಡಿ ಮುಚ್ಚುವ ಕೆಲಸ ಮಾತ್ರ ಮಾಡುತ್ತಿಲ್ಲ. ಈ ಮೋದಲು ಮುಚ್ಚಿದ ರಸ್ತೆ ಗುಂಡಿಗಳು ಮತ್ತೆ ಬಾಯ್ದೆರೆದುಕೊಳ್ಳುತ್ತಿವೆ ಅಂತಾ ವಾಹನ ಸವಾರರು ದೂರುತ್ತಿದ್ದಾರೆ.
ವಾಯ್ಸ್- ಇನ್ನು ಗುಂಡಿಗಳನ್ನು ಮುಚ್ಚೋಕೆ ಅಂತ ಕಳೆದ ಬಾರಿ ೩೦ ಕೋಟಿ ವೆಚ್ಚ ಮಾಡಿತ್ತು. ಹೀಗೆ ಪ್ರತಿ ವರ್ಷವೂ ಕೋಟಿ ಕೋಟಿ ಖರ್ಚು ಮಾಡಿದ್ರು ನೋ ಯೂಸ್. ಅದೆಲ್ಲವೂ ಒಂದು ಕಡೆಯಾದ್ರೆ ಇತ್ತ ತೇಪೆ ಹಚ್ಚುವ ಕೆಲಸವು ಕೂಡ ಕಳಪೆನೆ. ಪ್ರಮುಖ ರಸ್ತೆಗಳಲ್ಲೇ ಡೆಡ್ಲಿ ಗುಂಡಿಗಳು ತಲೆ ಎತ್ತಿದ್ದು, ಹೆರಿಗೆ ಆಸ್ಪತ್ರೆಗೆ ಹೋಗುವ ಮೊದಲೇ ರಸ್ತೆಯಲ್ಲೇ ಹೆರಿಗೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದರೆ ರಸ್ತೆಯಲಿ ಗುಂಡಿಗಳು ಜೀವ ಪಡೆಯೋಕೆ ಕಾದು ಕುಳಿತಿವೆ. ಇನ್ನು ಬ್ರಾಂಡ್ ಬೆಂಗಳೂರು ಕನಸು ಕಂಡಿರುವ ಡಿಕೆಶಿ ಅದನ್ನು ನನಸು ಮಾಡೊಕೆ ಹೊಸ ಹೊಸ ಪ್ಲಾನ್ ಮಾಡ್ತಾ ಇದಾರೆ. ಇನ್ನು ಗುಂಡಿಗಳನ್ನ ಮುಚ್ಚೋಕೆ ಡೆಡ್ ಲೈನ್ ಕೂಡ ಕೊಡಲಾಗಿದೆ. ಆದ್ರೆ ಸದ್ಯ ಒಂದು ಪರ್ಸೆ೦ಟ್ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಮುಂದಾಗ್ತಿಲ್ಲ.
ಅದೇನೇ ಇರಲಿ ಹಲವು ವರ್ಷಗಳಿಂದ ರಸ್ತೆಗಳಲ್ಲಿ ಗುಂಡಿಗಳಿಗೆ ಮುಕ್ತಿಯ ಭಾಗ್ಯವೇ ಸಿಗ್ತಿಲ್ಲ. ಬ್ರಾಂಡ್ ಬೆಂಗಳೂರು ಮಾಡುವ ಮುನ್ನ ಒಂದು ಬಾರಿ ಸರ್ಕಾರ ಗುಂಡಿಗಳಿಂದ ರಸ್ತೆ ಮುಕ್ತವಾಗುವಂತೆ ಮಾಡಲಿ ಎಂಬುದೇ ರಾಜ್ ನ್ಯೂಸ್ ಅಭಿಯಾನ.