ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬೆಳ್ಳಂಬೆಳಗ್ಗೆ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಸಂದೇಶವೊಂದರ ರವಾನೆಯಾಗಿದೆ ಎಂದು ಸುದ್ದಿ ಹರಡುತ್ತಿದ್ದಂತೆ ಪೋಷಕರಿಗೆ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಕ್ಷಣಮಾತ್ರದಲ್ಲಿ ಶಾಲೆಗಳಿಗೆ ಪೋಷಕರು ಓಡೋಡಿ ಬಂದ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಬರೋಬ್ಬರಿ 44 ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಕೂಡಲೇ ಸುರಕ್ಷತಾ ದೃಷ್ಟಿಯಿಂದ ಶಾಲಾ ಮಕ್ಕಳನ್ನು ರಕ್ಷಣೆಗೆ ಮುಂದಾಗಿದ್ದಲ್ಲದೇ, ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಶಾಲೆಗಳ ಆಡಳಿತ ಮಂಡಳಿ ಮೇಲ್ ಚೆಕ್ ಬಳಿಕ ಬಯಲಾಗುತ್ತಿದ್ದು, ಸಮಯ ಕಳೆದಂತೆ ಬೆದರಿಕೆ ಹಾಕಿದ ಶಾಲೆಗಳ ಸಂಖ್ಯೆ ಏರಿಕೆಯಾಗಿದೆ ಹಾಗಿದ್ರೆ ಯಾವೆಲ್ಲ ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ ಅನ್ನೋದನ್ನು ನೋಡೋದಾದ್ರೆ ಇಲ್ಲಿದೆ ಕಂಪ್ಲೀಟ್ ಹೈಲೈಟ್ಸ್……
ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ.
ಬೆಂಗಳೂರಿನ ಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ
ಬೆಂಗಳೂರಿನ ಉತ್ತರ ವಲಯ -4: 01 ಶಾಲೆ.
ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು. ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು
ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ
ಗ್ರೀನ್ ಹುಡ್ ಹೈಸ್ಕೂಲ್, ದಿನ್ನೇಪಾಳ್ಯ
ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ
ರಾಯನ್ ಇಂಟರ್ನ್ಯಾಷನಲ್ ಶಾಲೆ
ಆಲ್ ಬಷೀರ್ ಶಾಲೆ
ದೀಕ್ಷಾ ಹೈಟ್ ಶಾಲೆ
ಕಾಂಡರ್ ಇಂಟರ್ನ್ಯಾಷನಲ್ ಶಾಲೆ
ಬಿವಿಎಂ ಗ್ಲೋಬಲ್ ಶಾಲೆ
ಹೆಬ್ಬಗೋಡಿಯ ನಾಲ್ಕು ಶಾಲೆಗಳಿಗೆ ಹುಸಿಬಾಂಬ್
ಡಿವೈನ್ ಇಂಟರ್ನ್ಯಾಷನಲ್ ಶಾಲೆ
ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ
ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ
ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ
ಸರ್ಜಾಪುರದ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ
ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್
ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ
ಓಕರಿಡ್ಜ್ ಶಾಲೆ
ಟಿ ಐ ಎಸ್ ಬಿ ಶಾಲೆ
ಇನ್ವೆಂಚರ್ ಅಕಾಡೆಮಿ
ಜಿಗಣಿಯ ಎರಡು ಶಾಲೆಗಳಿಗೆ ಹುಸಿ ಬಾಂಬ್
ಅಚೀವರ್ಸ್ ಅಕಾಡೆಮಿ
ಎನ್ಡೆವರ್ಸ್ ಅಕಾಡೆಮಿ