ಬೆಂಗಳೂರು : ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂದು ಈಮೇಲ್ ಮೂಲಕ ಬೆದರಿಕೆವೊಡ್ಡಿದ ವಿಚಾರವಾಗಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ವಾಕಿಂಗ್ ಹೋಗುತ್ತಿದ್ದಾಗ ಯಾರೋಯಾರೋ ಕಾಲ್ ಮಾಡಿದ್ರು 15 ಪ್ರತಿಷ್ಟಿತ ಶಾಲೆಗಳಿಗೆ ಬಾಂಬ್ ಹಾಕ್ತಿವಿ ಅಂದಿದ್ದಾರೆ. ಮಕ್ಕಳು ದೇವರ ಸಮಾನ ಹೀಗಾಗಿ ಯಾವ ಮಕ್ಕಳಿಗೂ ಎನು ಆಗಬಾರದು ಆಗ ತಕ್ಷಣ ನಾನು ಸಿಎಂ, ಗೃಹಸಚಿವವರಿಗೆ ಮಾತನಾಡುತ್ತೇನೆ ಈ ಬಗ್ಗೆ ಸೂಕ್ತ ಭದ್ರತೆ ಕೊಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.