ಗದಗ : ಮಹಿಳಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಗದಗದಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೇ ನೀಡಿದ್ದಾರೆ. ದೇಶದ ಜನ್ರಿಗೆ ಗೊತ್ತಿದೆ, ಯಾವಾಗ ಮಹಿಳಾ ಮೀಸಲಾತಿ ಮಸೂದೆ ದೇಶದಲ್ಲಿ ಚರ್ಚೆ ಪ್ರಾರಂಭವಾಯಿತು ಅಂತಾ. ಅದು ಒಂದು ಹಂತದಲ್ಲಿ ರಾಜಸಭೆಯಲ್ಲಿ ಪಾಸು ಆಗಿತ್ತು ಆದ್ರೆ, ಅನಿವಾರ್ಯವಾಗಿ ಅದಕ್ಕೆ ತಡೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ, ತನ್ನ ರಾಜಕೀಯ ಬದ್ಧತೆಯನ್ನ ಬಗ್ಗೆ ಹಲವಾರು ಬಾರಿ ವ್ಯಕ್ತ ಮಾಡಿದೇವೆ. ನಮ್ಮ ದೇಶದ ಚಿಂತನೆ ಇತ್ತು, ನಮ್ಮ ಪಕ್ಷ ಮುಂದೇ ತಂದಿತ್ತು. ಅದನ್ನೇ ಈಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಎಂದು ಎಚ್ ಕೆ ಪಾಟೀಲ್ ಹೇಳಿದರು.