ಇದು ಎಲೆಕ್ಷನ್ ಬಜೆಟ್. ಕಳೆದ ಬಾರಿಯ ಬಜೆಟ್ ಬಗ್ಗೆ ಹೇಳಬೇಕಿತ್ತು. ಕಳೆದ ಬಾರಿ ಬಜೆಟ್ ನಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳ ಬಗ್ಗೆಯಾದರೂ ಹೇಳಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K SHIVKUMAR) ಹೇಳಿದ್ದಾರೆ.
ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ಈ ಬಜೆಟ್ನಲ್ಲಿ ಸಹಾಯ ನೀಡಲಾಗಿದೆ. ಪ್ರಧಾನಿ ಶ್ರೀ @narendramodi ಸರ್ಕಾರವು ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಸುಧಾರಿಸಲು, ಅನುವು ಮಾಡಿಕೊಡುತ್ತದೆ. #AmritKaalBudget #BJPYeBharavase pic.twitter.com/ACRkDQ8lbq
— BJP Karnataka (@BJP4Karnataka) February 1, 2023
ಬೆಂಗಳೂರಿ(BANGALORE) ನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಜೆಟ್ ಕೂಡ ಚುನಾವಣಾ ಪ್ರಣಾಳಿಕೆಯಾಗುತ್ತೆ. ನಾವು ಲೆಕ್ಕಾಚಾರ ಹಾಕಿ ಪ್ರಣಾಳಿಕೆ ತಯಾರು ಮಾಡಿದ್ದೇವೆ. ನಾವೇನು ಅಧಿಕಾರದಲ್ಲಿಲ್ಲ. ಆರ್ಥಿಕ ತಜ್ಞರು , ಹಣಕಾಸು ಇಲಾಖೆ ಮಾಜಿ ಸಚಿವರ ಜೊತೆ ಚರ್ಚೆ ಮಾಡಿ ಪ್ರಣಾಳಿಕೆ ತಯಾರಿ ಮಾಡ್ತಿದ್ದೇವೆ. ಇವರು ಮುಂದಿನ ಚುನಾವಣೆ ಗುರಿಯಾಗಿಟ್ಟುಕೊಂಡು ಘೋಷಣೆ ಮಾಡಿದ್ದಾರೆ. ಇದನ್ನುಓದಿ :- ಕೇಂದ್ರ ಸರಕಾರದ ಬಜೆಟ್ “ಸೀಡ್ಲೆಸ್ ಕಡಲೆಕಾಯಿ” ಇದ್ದಂತಿದೆ..! – ಕಾಂಗ್ರೆಸ್ ವ್ಯಂಗ್ಯ
Congratulations to Former PM Dr. Manmohan Singh on being conferred with UK's Lifetime Achievement Award.
It is a matter of great pride for the nation that Dr. Singh's leadership and economic contributions are recognised the world over. pic.twitter.com/4JpCcwZ62I
— DK Shivakumar (@DKShivakumar) February 1, 2023
ಭದ್ರಾ ಮೇಲ್ದಂಡೆ ಯೋಜನೆಗೆ ನಾವು 16 ಸಾವಿರ ಕೋಟಿ ಖರ್ಚು ಮಾಡಿದ್ವಿ. ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ. ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹಸಿರು ಪೀಠದ ಕ್ಲಿಯರೆನ್ಸ್ ತಗೊಳೋದು ಒಂದು ದಿನದ ಕೆಲಸ. ಮಹದಾಯಿ ವಿಚಾರದಲ್ಲಿ ಯಾಕೆ ಅಷ್ಟು ಸಂಭ್ರಮಿಸುತ್ತಾರೆ..? 416 ಟಿಎಂಸಿ ಸಮುದ್ರಕ್ಕೆ ಹರಿದು ಹೋಗಿದೆ. ಯಾಕೆ ತಡೆಯಲಿಲ್ಲ. ಬರೀ ಭರವಸೆಗಳ ಮೇಲೆ ಸರ್ಕಾರ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ರು.
ಇದನ್ನುಓದಿ :- ಪ್ರಹ್ಲಾದ್ ಜೋಶಿ ಗಿಫ್ಟ್ ನೀಡಿದ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್