ಪುತ್ತೂರು : ನದಿಯಲ್ಲಿ ಈಜುವಾಗ ಯುವಕನೊಬ್ಬ ಹೃದಯಾಘಾತಕೊಂಡ ಸಾವನ್ನಪ್ಪಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಪುತ್ತೂರಿನ ದೇವಸ್ಯ ನಿವಾಸಿ ಸುಜಿತ್(27) ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದ ಯುವಕ ಎಂದು ತಿಳಿಯಲಾಗಿದೆ.
ಸುಜಿತ್ ಪುತ್ತೂರು ಬೊಳುವಾರಿನಲ್ಲಿ ಗ್ಯಾರೇಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಸುಜಿತ್ ಬೆಂದ್ರ್ ತೀರ್ಥದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು ಈ ವೇಳೆ ಅಲ್ಲೇ ಪಕ್ಕದಲ್ಲಿರುವ ನದಿಯೊಂದಕ್ಕೆ ಈಜಾಡಲು ತೆರಳಿದ್ದರು ಈಜಾಡುತ್ತಿದ್ದ ವೇಳೆಯೇ ಹೃದಯಾಘಾತಗೊಂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೃದಯಾಘಾತ ಘಟನೆಯ ಸುದ್ದಿ ತಿಳಿದು ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.