ಬೆಂಗಳೂರು : ಪೊಲೀಸ್ ಕಿರುಕುಳ ನೀಡಿದ್ದಾರೆಂದು ಮನನೊಂದು ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ನಡೆದಿದೆ. ಈಗ ಪೊಲೀಸ್ ಟಾರ್ಚರ್‌ನಿಂದ ವ್ಯಕ್ತಿ ಸತ್ತಿದ್ದಾನಾ ಎಂದು ಅನುಮಾನ ವ್ಯಕ್ತವಾಗಿದೆ.
ವೈಯಾಲಿಕಾವಲ್ ಪೊಲೀಸರು ಬೆಲ್ಟ್‌ನಿಂದ ಹೊಡೆದ್ರು ಬ್ಯಾಟ್‌ನಿಂದ ಬಡಿದು ಶೂನಿಂದ ಒದ್ದಿದ್ದರು ಎಂದು ಡೆತ್‌ನೋಟ್ ಬರೆದಿಟ್ಟು ನಾಗರಾಜ್(47) ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿರುವ ಘಟನೆಯಾಗಿದ್ದು ಸಾವಿಗೂ ಮುನ್ನ ಎರಡು ಪುಟದ ಡೆತ್ ನೋಟ್ ಬರೆದಿರುವ ನಾಗರಾಜ್.
ಡೆತ್ ನೋಟ್‌ನಲ್ಲಿ ವೈಯಾಲಿ ಕಾವಲ್ ಪೊಲೀಸ್ ಇನ್ಸ್ ಪೆಕ್ಟರ್ ಸನಾವುಲ್ಲಾ ,ನಟರಾಜ್,ಎಂ.ಸಿ. ಯೆರ್ರೇಗೌಡ ಹೆಸರು ಉಲ್ಲೇಖವಾಗಿದೆ,
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಕಂಪನಿ ಹಣ ಪಡೆದು ವಂಚಿಸಿದೆ ಎಂದು ವೈಯಾಲಿಕಾವಲ್ ಠಾಣೆಯಲ್ಲಿ ನಾಗರಾಜ್ ವಿರುದ್ಧ ದೂರು ನೀಡಿದ್ದ ನಟರಾಜ್
ಸನಾವುಲ್ಲ ಒಡೆತನದ ಇಪಿಪಿ(ENVIRONMENTAL POLLUTION PROJECT) ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನಾಗರಾಜ್ ಹಲವು ಜನರಿಂದ ಹಣ ಪಡೆದು ವಂಚಿಸಿರುವ ಸನಾವುಲ್ಲ ಹಾಗಾಗಿ ದೂರು ದಾಖಲಿಸಿದ್ದ ನಟರಾಜ್ ಸನಾವುಲ್ಲ ಬದಲಾಗಿ ನಾಗರಾಜ್ ಕರೆದೊಯ್ದು ಟಾರ್ಚರ್ ಕೊಟ್ಟಿರುವ ಪೊಲೀಸರು?
ಪೊಲೀಸ್ ಟಾರ್ಚರ್ ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದ್ದು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಡೆತ್ ನೋಟ್ ಆಧರಿಸಿ ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬರಬೇಕಿದೆ.