ಬೆಳಗಾವಿ : ಬೆಳಗಾವಿ ಚಳಿಗಾಲದ ಅಧಿವೇಶನದ ಮೂರನೇ ದಿನವು ಪ್ರತಿಭಟನೆ ಕಾವು ತಟ್ಟಲಿದ್ದು, ಶಕ್ತಿಸೌಧದ ಹೊರಗೆ ಮೂರನೇ ದಿನವು ಸಾಲು ಸಾಲು ಪ್ರತಿಭಟನೆಗಳು ನಡೆಯಲಿದೆ.
ಬೆಳಗಾವಿ ಚಳಿಗಾಲದ ಅಧಿವೇಶನ ಮೂರನೇ ದಿನವಾದ ಇಂದು ಬರೊಬ್ಬರಿ 6 ಸಂಘಟನೆಗಳಿಂದ ಪ್ರತಿಭಟನೆ, 2 ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.
ಅಖಿಲ ಕರ್ನಾಟಕ ರೈತ ಸಂಘದಿಂದ ಹೋರಾಟಕ್ಕೆ ಮುಂದಾಗಿದ್ದು, ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು. ಕರೆಗಳ ಒತ್ತುವರಿ ತೆರುವು ಮಾಡಬೇಕು. ಖಾನಾಪುರ ತಾಲೂಕಿನ ರೈತರಿಗೆ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಕಲ್ಪಿಸಲು ಒತ್ತಾಯಿಸಲಾಗುತ್ತದೆ.
ಕರ್ನಾಟಕ ರಾಜ್ಯ ನೇಕಾರರ ಸಂಘದಿಂದ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ 46 ನೇಕಾರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಕೊಡಬೇಕು, ನೇಕಾರರಿಗೂ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯ ಒದಗಿಸಲು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನ ಮುಚ್ಚಬಾರದು, ಗಡಿ ಭಾಗದಲ್ಲಿ ಹೊಸ ಸರ್ಕಾರಿ ಶಾಲೆ ಆರಂಭಿಸಬೇಕು. ಕಿತ್ತೂರು, ಖಾನಾಪುರ ತಾಲೂಕುಗಳನ್ನ ಬೆಳಗಾವಿ ಲೋಕಸಭೆ ಗೆ ಸೇರಿಸಲು ಆಗ್ರಹಿಸಲಾಗುತ್ತದೆ.
ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳೂ ಪ್ರತಿಭಟನೆ ಮಂದಾಗಿದ್ದು, ಖಾಸಗಿ ಐಟಿಐ ಕಾಲೇಜುಗಳ ಸಿಬ್ಬಂದಿಯನ್ನ ವೇತನಾನುದಾನಕ್ಕೆ ಒಳಪಡಿಸಲು ಒತ್ತಾಯಿಸಿ ಧರಣಿ ನಡೆಸಲಿದ್ದಾರೆ. ಭಾರತೀಯ ಕಿಸಾನ ಸಂಘದಿಂದ ಬರ ಪರಿಹಾರ ಒದಗಿಸಲು ಪ್ರತಿಭಟನೆ ನಡೆಸಲಿದೆ.