ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರೋ ವಿಧಾನ ಮಂಡಲ ಚಳಿಗಾಲ ಅಧಿವೇಶನದ ಸದನದಲ್ಲೇ ಶಿವಲಿಂಗೇಗೌಡ ಮತ್ತು ರೇವಣ್ಣ ನಡುವೆ ಜಟಾಪಟಿ ನಡೆದಿದೆ.
ಸದನದಲ್ಲಿ ಶಿವಲಿಂಗೇಗೌಡ ಮತ್ತು ರೇವಣ್ಣ ಇಬ್ಬರಿಗೂ ಕೊಬ್ಬರಿಗೆ ಬೆಂಬಲ ನೀಡಲು ಸರ್ಕಾರದ ಗಮನ ಸೆಳಯುವ ಕಾತುರ. ತಮ್ಮ ಕ್ಷೇತ್ರದ ಜನರ ಮತ್ತು ತೆಂಗಿನಕಾಯಿ ಬೆಳೆಗಾರರ ಕ್ರೆಡಿಟ್ ಪಡೆದುಕೊಳ್ಳುವ ಹವಣಿಕೆ ಇದ್ದಿರಬಹುದು. ಶಿವಲಿಂಗೇಗೌಡರು ಮಾತಾಡಲು ಮೇಲೇಳುತ್ತಿದ್ದಂತೆ ರೇವಣ್ಣ ಸಹ ಮೇಲೆದ್ದು ಸಭಾಧ್ಯಕ್ಷರೇ ಸಭಾಧ್ಯಕ್ಷರೇ ಅನ್ನುತ್ತಾರೆ. ತನಗೆ ಮಾತಾಡಲು ನೀಡಿರುವ ಅವಕಾಶವನ್ನು ರೇವಣ್ಣ ಕಸಿದುಕೊಳ್ಳುವ ಪ್ರಯತ್ನಮಾಡಿದ್ದು ಗೌಡರಿಗೆ ರೇಗುತ್ತದೆ ಮತ್ತು ರೇವಣ್ಣ ಮೇಲೆ ಹರಿಹಾಯಲಾರಂಭಿಸುತ್ತಾರೆ. ರೇವಣ್ಣ ತಮ್ಮ ಮಾತು ನಿಲ್ಲಿಸದಾದಾಗ ಸಭಾಧ್ಯಕ್ಷ ಯುಟಿ ಖಾದರ್ ಮಧ್ಯಪ್ರವೇಶಿಸಿ, ಶೂನ್ಯ ವೇಳೆಯಲ್ಲಿ ಪ್ರಶ್ನೆ ಕೇಳಲು ಶಿವಲಿಂಗೇಗೌಡರು ಸೋಮವಾರ ಬೆಳಗ್ಗೆಯೇ ಹೆಸರು ಬರೆಸಿದ್ದಾರೆ, ರೇವಣ್ಣ ಸ್ವಲ್ಪ ಹೊತ್ತಿಗೆ ಮುಂಚೆಗಷ್ಟೇ ಬರೆಸಿರೋದು, ಹಾಗಾಗಿ ಶಿವಲಿಂಗೇಗೌಡರು ಮಾತಾಡುವಾಗ ಅಡ್ಡಿ ಮಾಡಬೇಡಿಎಂದು ಟಾಂಗ್ ಕೊಟ್ಟಿದ್ದಾರೆ.