ಬಾಗಲಕೋಟ : ವಿದ್ಯಾರ್ಥಿಗಳಲ್ಲಿ ಸಮಾನತೆಯ ಉದ್ದೇಶದಿಂದ ಶಾಲೆ, ಕಾಲೇಜ್ ಗಳಲ್ಲಿ ಸಮವಸ್ತ್ರ ಕಡ್ಡಾಯವಿದೆ. ಆದರೆ ಸಿಎಂ ಸಿದ್ದರಾಮಯ್ಯ ಹಿಜಾಬ್ ಆದೇಶ ವಾಪಸ್ ಪಡೆಯುವೆ ಎನ್ನುತ್ತಾರೆ. ಕೋಟ್ ೯ದಲ್ಲಿ ವಿಚಾರಣೆ ಇದ್ದರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನೂತನ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ವಾಗ್ದಾಳಿ ನಡೆಸಿದರು.
ಬಾಗಲಕೋಟ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ತಾನಾಗಿಯೇ ಬಿದ್ದು ಹೋಗಲಿದೆ ಎಂದರು.ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರೂ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಬಿಟ್ಟಿ ಭಾಗ್ಯಕ್ಕೆ ಒತ್ತು ನೀಡಿದಷ್ಟು ರಾಜ್ಯದ ಅಭಿವೃದ್ಧಿಯ ಕಾಳಜಿ ತೋರುತ್ತಿಲ್ಲ ಎಂದರು. ಪಡೆದು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮತ್ತೊಮ್ಮೆ ಮಾಡಲು ಕಾರ್ಯಕರ್ತರು, ಹಿರಿಯರು ಒಗ್ಗೂಡಿ ಪಕ್ಷ ಸಂಘಟಿಸುತ್ತೇವೆ.
ಬಿಎಸ್ವೈ ಪುತ್ರ ಎಂಬ ಕಾರಣಕ್ಕೆ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಅವರ ಬಗ್ಗೆ ವಿಜಯಪುರದವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೆ ಟಾಂಗ್ ನೀಡಿದರು. ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು ಸಭೆ ನಡೆಸಲಿದ್ದು ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಜಿಲ್ಲಾಧ್ಯಕ್ಷರು, ನಾನಾ ಮೋರ್ಚಾ ಪದಾಧಿಕಾರಿಗಳ ನೇಮಕ ಕುರಿತು ರಾಜ್ಯ ಕಮಿಟಿ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.