ಬೆಂಗಳೂರು : ನಾಲ್ಕು ರಾಜ್ಯಗಳ ಚುನಾವಣಾ ಮತ ಎಣೆಕೆಯಲ್ಲಿ ಬರ್ತಿರುವ ಲೀಡಿಂಗ್ ಬಿಜೆಪಿಗೆ ಸಂತಸ ತಂದಿದೆ ವಿಪಕ್ಷ ನಾಯಕ ಆರ್ ಅಶೋಕ್ (Opposition leader R Ashoka) ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸೋತಿದ್ವಿ ತೆಲಂಗಾಣದಲ್ಲೂ ನಾವು ನಾಲ್ಕು ಸೀಟು ಬಂದಿದ್ದೇವು. ರಾಜಸ್ಥಾನ, ತೆಲಂಗಾಣದಲ್ಲೂ ಬಿಜೆಪಿ ಹೆಚ್ಚು ಸೀಟುಗಳು ಬರ್ತಿದೆ. ಬಿಜೆಪಿ ಗೆಲ್ಲೋದು ನಿಶ್ಚಿತವಾಗಿದೆ. ಎಲ್ಲಾ ಕಡೆಯೂ ಬಿಜೆಪಿ ಜಯದ ಹೊಸ್ತಿಲಲ್ಲಿ ಇದೆ. ಇದೆಲ್ಲವೂ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಎಲ್ಲಾ ಕಡೆ ಟೋಪಿ ಹಾಕಿಕೊಂಡು ಹೋಗಿ ಈ ನಮ್ಮ ಕಾಂಗ್ರೆಸ್ ನಾಯಕರು ತೆಲಂಗಾಣದ ರೆಸಾರ್ಟ್ ನಲ್ಲಿ ಸರ್ವೀಸ್ ಗೆ ಕೊಡೋಕೆ ಹೋಗಿದ್ದಾರೆ. ಇದು ಒಂದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದಿದ್ದಾರೆ