ಮಹಾರಾಷ್ಟ್ರ ( MAHARASTRA ) ದ ವಾಹನಗಳ ಮೇಲಿನ ದಾಳಿ ನಿಲ್ಲಿಸಲಿ ಎನ್ ಸಿ.ಪಿ ಮುಖಂಡ ಶರದ್ ಪವಾರ್ ಕರ್ನಾಟಕ ( KARANATAKA ) ಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಜನರನ್ನ ಪ್ರಚೋದಿಸಲಾಗುತ್ತಿದೆ ಎಂದು ಗುಡುಗಿದ್ದಾರೆ. ಹೀರೆಬಾಗೇವಾಡಿಯಲ್ಲಿ ನಡೆದ ಘಟನೆ ಖಂಡನೀಯ. ವಾಹನಗಳಿಗೆ ಕರವೇ ಕಲ್ಲೆಸೆತ ಘಟನೆಯನ್ನ ಶರದ್ ಪವಾರ್ ಖಂಡಿಸಿದ್ದಾರೆ. ನಮ್ಮ ತಾಳ್ಮೆಯನ್ನ ಪರೀಕ್ಷಿಸಬಾರದು. ಸಮಸ್ಯೆ ಬಗೆಹರಿಸಲು ಶರದ್ ಪವಾರ್ ಸಿಎಂ ಬೊಮ್ಮಾಯಿಗೆ 48 ಗಂಟೆಗಳ ಗಡುವು ನೀಡಿದ್ದಾರೆ. ಇದನ್ನೂ ಓದಿ : – ವಿಷ್ಣುವರ್ಧನ್ ಹೊಸ ಮನೆಗೆ ಭೇಟಿ ನೀಡಿದ ಯಶ್ ರಾಧಿಕಾ, ಸುದೀಪ್
ಸಮಸ್ಯೆ ಬಗೆಹರಿಯದಿದ್ರೆ ಬೆಳಗಾವಿ ( BELGAVI ) ಗೆ ಭೇಟಿ ನೀಡುವೆ ಎಂದು ಎಚ್ಚರಿಕೆ ನೀಡಿದ್ದಾರೆ. ಶರದ್ ಪವಾರ್, ಮುಂಬೈನಲ್ಲಿ ದಿಢೀರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದು, ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಡಿಸಿಎಂ ಫಡ್ನವೀಸ್ ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದಾರೆ. ಹೀರೇಬಾಗೇವಾಡಿ ಘಟನೆ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿದ್ದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಬಂದ್….!