ಬಿಜೆಪಿ(bjp) ವಿರುದ್ದ ಇದೀಗ ಕಾಂಗ್ರೆಸ್(congress) ಮತ್ತೊಂದು ಹೊಸ ಅಸ್ತ್ರ ಬೀಸಿದೆ..ಅದು ನೀರಾವರಿ ಇಲಾಖೆಯಲ್ಲಿ ಆಗಿರುವ ಬ್ರಹ್ಮಾಂಢ ಭ್ರಷ್ಟಾಚಾರ…
ಅದೂ ಆಡಳಿತ ಪಕ್ಷದಲ್ಲಿರುವ ಶಾಸಕರೇ ಆಗಿರುವ ಗೂಳಿಹಟ್ಟಿ ಶೇಖರ್ ನೀರಾವರಿ ಇಲಾಖೆಗೆ ಬರೆದ ಪತ್ರ ಕಾಂಗ್ರೆಸ್ ಗೆ ದೊಡ್ಡ ಆಹಾರವಾಗಿದೆ..ಒಂದು ತರದಲ್ಲಿ ಪೊಲಿಟಿಕಲ್ ಚಾರ್ಜ್ ಶೀಟ್ ಹಾಕಿದ್ದಾರೆ.
ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರಾದ ಸುರ್ಜೇವಾಲಾ, ಸಿದ್ದರಾಮಯ್ಯ ಮತ್ತು ಡಿಕೆಶಿ ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ಸಿಎಂ ಮತ್ತು ಸಚಿವರ ಮೇಲೆ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಲಾಟಿ ಬೀಸಿದ್ದಾರೆ..
ನೀರಾವರಿ ಇಲಾಖೆಯ ವಿವಿಧ ನಿಗಮಗಳಲ್ಲಿ 18 ಸಾವಿರ ಕೋಟಿ ಕಾಮಗಾರಿಗಳ ಟೆಂಡರ್ ಅಕ್ರಮ, ಪೆಂಡಿಂಗ್ ಬಿಲ್ ಕ್ಲಿಯರೆನ್ಸ್ ಗೆ ಸಿಎಂ ಕಚೇರಿಗೆ ಕಮಿಷನ್ ಕೊಡಬೇಕಾಗಿದೆ ಅಂತಾ ಸಿದ್ದರಾಮಯ್ಯ, ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ..
ಈ ಆರೋಪದ ಬೆನ್ನಲ್ಲೇ ನಮ್ಮ ಸರ್ಕಾರ ಬಂದೇ ಬರುತ್ತೆ ಆ ಬಳಿಕ ವಿಚಾರಣಾ ಸಮಿತಿ ರಚನೆ
ಮಾಡೋ ಮೂಲಕ ತನಿಖೆ ಮಾಡಿಸ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ : – ಟಿಪ್ಪುವಿನಂತೆ ಸಿದ್ದರಾಮಯ್ಯರನ್ನ ಹೊಡೆದುಹಾಕಿ ಹೀಗಂತ ಹೇಳ್ದವರು ಯಾರು ಗೊತ್ತಾ ?