Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಸಿಲಿಕಾನ್ ಸಿಟಿಯಲ್ಲಿ ಶುರುವಾಗಿದೆ ಡಾಗ್ ಶೋ ಮಸ್ತಿ

ಬೆಂಗಳೂರು : ಶ್ವಾನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಮ್ಮ ಶ್ವಾನಗಳಿಗೆ ಅಂತಾನೆ ಲಕ್ಷ ಲಕ್ಷ ಖರ್ಚು ಮಾಡೋಕು ರೆಡಿ ಇರ್ತಾರೆ. ಇಂತಹ ಶ್ವಾನ ಪ್ರಿಯರಿಗೆ ಅಂತಾನೆ ಸಿಲಿಕಾನ್ ಸಿಟಿಯಲ್ಲಿ ಡಾಗ್ ಷೋ ನಡೆಸಲಾಯಿತು. ಕಲರ್ ಫುಲ್ ಡಾಗ್ ಷೋ ನಲ್ಲಿ ಸಿಟಿ ಜನ ಸಕತ್ ಫನ್ ಮಾಡಿದ್ರು.

ಒಂದ್ಕಡೆ ಶ್ವಾನಗಳ ಜೊತೆ ಮಾಲೀಕರ ವಾಕಿಂಗ್.. ಇನ್ನೊಂದ್ಕಡೆ ಮುದ್ದು ಮುದ್ದು ಶ್ವಾನಗಳ ಜೊತೆ ಫೋಟೋಗೆ ಪೋಸ್ ನೀಡ್ತಿರೋ ಸಿಟಿ ಮಂದಿ.. ಎಸ್… ಸಿಲಿಕಾನ್ ಸಿಟಿಯಲ್ಲಿ ಕಲರ್ ಫುಲ್ ಡಾಗ್ ಶೋ ಮಸ್ತಿ ಶುರುವಾಗಿದೆ. ವೀಕೆಂಡ್ ನಲ್ಲಿ ಸಿಟಿ ಮಂದಿಗೆ ರಿಲೀಫ್ ನೀಡೋಕೆ ಅಂತಾನೆ ಎರಡು ದಿನಗಳ ಡಾಗ್ ಷೋ ನಡೆಸಲಾಗ್ತಿದೆ. ಎಲ್ಲಾ ರೀತಿಯ ಡಾಗ್ ಸೆಂಟರ್ ಆಗಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್ ಗ್ರಾಂಡ್ ಸಾಕ್ಷಿಯಾಗಿತ್ತು.

ಹೌದು.. ಸಿಲಿಕಾನ್ ಸಿಟಿ ಕೆನಲ್ ಕ್ಲಬ್ ಹಾಗು ಬೆಂಗಳೂರು ಕನೈನ್ ಕ್ಲಬ್ ಆಯೋಜಿಸಿದ ಡಾಗ್ ಷೋ ನಲ್ಲಿ ಸುಮಾರು 50 ತಳಿಯ 400 ರಿಂದ 500 ನಾಯಿಗಳ ಚಾಂಪಿಯನ್ ಶೀಪ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಸಿಟಿ ಜನ ತಮ್ಮ ತಮ್ಮ ವಿವಿಧ ತಳಿಯ ಶ್ವಾನಗಳ ಜೊತೆ ಎಂಟ್ರಿ ಕೊಟ್ಟಿದ್ರು. ಶೋಗೆ ಹಸ್ಕಿ, ಬೆಳ್ಳಿಯನ್ ಕೆಪರ್ಡ್ ನಾಯಿ, ಜರ್ಮನ್ ಶೆಪರ್ಡ್, ಡಾಬರ್‌ಮನ್, ಲ್ಯಾಬ್ರಡಾರ್‌, ರಿಟ್ರೈವರ್, ಸೈರಿಯಲ್, ಚುವಾವೋ, ರೊಡಿಷನ್ ರಿಜ್ ಬ್ಯಾಕ್, ಗೋಲ್ಡನ್‌ ಶಿಳ್ಳೆವರ್, ಬಾಕ್ಸರ್, ಗ್ರೇಟ್‌ಡೇನ್, ಕಾಕರ್ ಸೇರಿದಂತೆ ವಿಶೇಷ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿದ್ದವು. ಕೋರೆಹಲ್ಲು ತಳಿಯ ನಾಯಿಯ ಕುರಿತು ಇನ್ನಷ್ಟು ಜ್ಞಾನ ವೃದ್ಧಿಸಿಕೊಳ್ಳುವ ಹಾಗೂ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಇದಾಗಿತ್ತು.

ಪ್ರತಿ ವರ್ಷ ಸಂಸ್ಥೆ ಈ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ಮುಧೋಳ ನಾಯಿಯನ್ನು ಇದೇ ಸಂಸ್ಥೆ ತನ್ನ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪರಿಚಯಿಸಿತ್ತು. ಇದು ನಂತರ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವಕ್ಕೆ ಪರಿಚಿತವಾಯಿತು. ಸೇನೆಯಲ್ಲಿ ಕೂಡ ಈ ತಳಿಯ ನಾಯಿಗಳು ಸೇವೆ ಸಲ್ಲಿಸುತ್ತಿವೆ. ಇನ್ನು ಈ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ ಫಾರ್ಮಾ ಕಂಪನಿಗಳು, ಅಂತಾರಾಷ್ಟ್ರೀಯ ಸೆಗ್ಮ್೦ಟ್‌ಗಳನ್ನು ಉತ್ಪಾದಕರು ಹಾಗೂ ಇತರೆ ಉತ್ಪನ್ನಗಳನ್ನು ವಿನ್ಯಾಸಪಡಿಸುವವರು ಕೂಡ ಇದ್ದರು. ಶ್ವಾನ ಹಾಗೂ ಇತರೆ ಸಾಕುಪ್ರಾಣಿಗಳ ಲೈಫ್ ಸ್ಟೈಲ್ ಹೆಚ್ಚಿಸುವ ಉತ್ಪನ್ನಗಳು ಶ್ವಾನ ಪ್ರಿಯರ ಗಮನ ಸೆಳೆದವು.

ಒಟ್ಟಾರೆ ವಾರ ಪೂರ್ತಿ ಬ್ಯುಸಿ ಸ್ಕೆಡ್ಯೂಲ್ ನಲ್ಲಿರುವ ಪೆಟ್ ಲವರ್ಸ್ಗಳಿಗೆ ಈ ಪೆಟ್ ಶೋ ಒಳ್ಳೆ ಜಾಗ ಆಗಿತ್ತು. ತಮ್ಮ ಶ್ವಾನಗಳ ಆಕ್ಟಿವಿಟಿಸ್ ನಲ್ಲಿ ಭಾಗಿಯಾಗಿದ್ದ ಶ್ವಾನ ಮಾಲೀಕರು ವೀಕೆಂಡ್ ಸಖತ್ ಎಂಜಾಯ್ ಮಾಡಿದ್ರು.

ವರದಿ : ಹರ್ಷಿತಾ ಪಾಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!