ಬೆಂಗಳೂರು : ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದಲ್ಲ. ಕುಮಾರಸ್ವಾಮಿಯವರೇ ಸಮಯ ನಿಗಧಿ ಮಾಡಿ ನಾನು ಚರ್ಚೆ ಮಾಡುತ್ತೇನೆ ಎಂದು ಡಿಕೆಶಿ ಬಹಿರಂಗ ಆಹ್ವಾನ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ವಿಚಾರ ಚರ್ಚೆಗೆ ಅಸೆಂಬ್ಲಿಯಲ್ಲಾದರು ಸರಿ ಅಥವಾ ಯಾವ ಚಾನಲ್ನಲ್ಲಾದರೂ ಸರಿ ಟೈಂ ಫಿಕ್ಸ್ ಮಾಡಿ ನಾನು ಮಾತನಾಡುತ್ತೇನೆ . ನವೆಂಬರ್ ಒಂದನೇ ತಾರೀಕಿನ ಬಳಿಕ ನಾನು ಚರ್ಚೆಗೆ ಸಿದ್ದ, ನಾನೇನು ಮಾಡಿದ್ದೇನೆ ಅವರೇನು ಮಾಡಿದ್ದಾರೆ ಎನ್ನುವುದನ್ನು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದಲ್ಲ ಕುಮಾರಸ್ವಾಮಿಯವರೇ ಸಮಯ ನಿಗಧಿ ಮಾಡಿ ನಾನು ಚರ್ಚೆ ಮಾಡುತ್ತೇನೆ ಎಂದು ಡಿಕೆಶಿ ಬಹಿರಂಗ ಆಹ್ವಾನ ನೀಡಿದ್ದಾರೆ