ಆನೇಕಲ್ : ಅತ್ತಿಬೆಲೆ ಮೊನ್ನೆ ನಡೆದ ಪಟಾಕಿ ದುರುಂತಕ್ಕೆ ಸಂಬಂಧಿಸಿದಂತೆ ಇದೀಗ ದಿಢೀರ್ ಅಂತಾ ಪಟಾಕಿ ಗೋಡೌನ್ ಅನ್ನು ಮಾರಾಟಗಾರರು ಅಂಗಡಿ ಬಂದ್ ಮಾಡಿದ್ದಾರೆ. ಅತ್ತಿಬೆಲೆ ಪಟಾಕಿ ದುರಂತ ನಡೆದ ಬೆನ್ನಲ್ಲೆ ಬಾಲಾಜಿ ಟ್ರೇಡರ್ಸ್ ಅಕ್ಕ ಪಕ್ಕದ ಇತರೆ ಮಳಿಗೆಗಳು ಬಂದ್ ಆಗಿವೆ.
ಅನಧಿಕೃತ ಪಟಾಕಿ ಗೋಡೌನ್ ಮಾರಾಟಗಾರು ಮಳಿಗೆಯ ಮುಂದಿದ್ದ ಬ್ಯಾನರ್ ತೆರವು ಮಾಡಿ ಅಂಗಡಿ ಕ್ಲೋಸ್ ಮಾಡಿದ್ದಾರೆ. ಜತೆಗೆ ಸಂಗ್ರಹಿಸಿಟ್ಟಿದ್ದ ಪಟಾಕಿಯನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಪಟಾಕಿಯನ್ನು ಅತ್ತಿಬೆಲೆ ಯ ಬಾಲಾಜಿ ಕ್ರಾಕರ್ಸ್ ಬಳಿ ತಮಿಳುನಾಡಿನ ಶಿವಕಾಶಿಯಿಂದ ಲೋಡ್ ಆಗಿ ಬಂದಿದ್ದ ಪಟಾಕಿಯನ್ನು ಅನ್ ಲೋಡ್ ಮಾಡಲು ನಿಲ್ಲಿಸಲಾಗಿತ್ತು. ಪಟಾಕಿ ಇದ್ದ ಕಂಟೈನರ್ ವಾಹನದ ಪಕ್ಕದಲ್ಲೆ ವಿದ್ಯುತ್ ಕನೆಕ್ಷನ್ ವಯರ್ ಹಾದುಹೋಗಿತ್ತು.
ನಿಂತಿದ್ದ ಕಂಟೈನರ್ ಲಾರಿಗೆ ವಿದ್ಯುತ್ ಸ್ಪಾರ್ಕ್ ಆಗಿ ಕಿಡಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ಐದಾರು ಜೆಸಿಬಿಗಳ ಮೂಲಕ ಬೆಂಕಿ ಬಿದ್ದ ಗೋದಾಮು ಮಳಿಗೆಯನ್ನು ನೆಲಸಮ ಮಾಡಲಾಗಿದೆ.