ದೆಹಲಿ: ಇಂದು ಸಂಜೆ 4.30ರ ಸುಮಾರಿಗೆ ದೆಹಲಿಗೆ ಮಾಜಿ ಸಚಿವ ವಿ ಸೋಮಣ್ಣ (Former minister V Somanna) ತೆರಳಿದ್ದಾರೆ. ಸಂಜೆ 4.30 ರ ವಿಮಾನದಲ್ಲಿ ದೆಹಲಿಗೆ ಸೋಮಣ್ಣ ಪ್ರಯಾಣ ಬೆಳೆಸಲಿದ್ದಾರೆ.
ಎರಡು ದಿನ ದೆಹಲಿಯಲ್ಲೇ ಮಾಜಿ ಸಚಿವ ವಿ. ಸೋಮಣ್ಣ ವಾಸ್ತವ್ಯ ಹೂಡುವ ಸಾಧ್ಯತೆಯಿದೆ. ಅಮಿತ್ ಶಾ, ಜೆ ಪಿ ನಡ್ಡಾ ಭೇಟಿ ಮಾಡಿ ಸದ್ಯದ ಪರಿಸ್ಥಿತಿ ಬಗ್ಗೆ ಸೋಮಣ್ಣ ಚರ್ಚಿಸಲಿದ್ದಾರೆ. ಅಷ್ಟೇ ಅಲ್ಲದೇ, ಹೈಕಮಾಂಡ್ ನಾಯಕರ ಜೊತೆ ವಿ ಸೋಮಣ್ಣ.. ಸಮಾಲೋಚನೆ ನಡೆಸಲಿದ್ದಾರೆ, ತಮ್ಮ ಸೋಲಿನ ಕಾರಣ, ಪಕ್ಷದ ವಿದ್ಯಮಾನ ಬಗ್ಗೆ ವಿ ಸೋಮಣ್ಣ ಚರ್ಚಿಸಲಿದ್ದಾರೆ.