ಚುನಾವಣೆ (Election) ಹೊಸ್ತಿಲಲ್ಲಿರುವಾಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD.Kumaaswamy) ಬ್ರಾಹ್ಮಣರ ಬಗ್ಗೆ ಹೇಳಿದ್ದೇ ತಡ, ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದಾರೆ. ಬ್ರಾಹ್ಮಣ ಸಮುದಾಯ ಕೂಡ ಕ್ಷಮೆ ಕೇಳುವಂತೆ ಕುಮಾರಸ್ವಾಮಿಯನ್ನು ಆಗ್ರಹಿಸಿದೆ. ಆದ್ರೆ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಹೇಳಿಕೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ನಾನು ನಿನ್ನೆ ಕೊಟ್ಟ ಹೇಳಿಕೆ ಬಗ್ಗೆ ಹಲವಾರು ಪ್ರತಿಕ್ರಿಯೆ ಬಂದಿದೆ.
ನಾನು ಒಂದು ಸಮಾಜದ ಬಗ್ಗೆ ಅಗೌರವ ತೋರಿಸಿಲ್ಲ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಬ್ರಾಹ್ಮಣ (Brahim) ಸಮಾಜದ ಬಗ್ಗೆ ಅಪಾಮಾನ ಮಾಡಿದ್ದೇನೆ ಎನ್ನುತ್ತಿದ್ದಾರೆ. ಹಳೆ ಕರ್ನಾಟಕ ಭಾಗದ ಬ್ರಾಹ್ಮಣ ಸಮಾಜ ಅತ್ಯಂತ ಗೌರವ ಸಮಾಜ ಎಂದು ಹೇಳಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪುಸ್ತಕದಲ್ಲಿ ಅನೇಕ ತಿರುಚುವ ಕೆಲಸ ಆಯ್ತು. ಇಂಥಹ ವ್ಯಕ್ತಿಗಳ ಬಗ್ಗೆ ಎಚ್ಚರ ಇರಲಿ ಅಂತ ಹೇಳಿದ್ದು ಎಂದರು. ಚಂದ್ರಮೌಳಿ ಕೆಡವಿದವರಾರು, ಗಾಂಧೀಜಿಯವರನ್ನ ಕೊಂದಿದ್ಯಾರು, ಶಿವಾಜಿ ಕೊಂದಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ : – ಕೆ.ಆರ್. ಪುರ – ವೈಟ್ ಫೀಲ್ಡ್ ನಡುವೆ 12 ನಿಮಿಷದಲ್ಲಿ ಸಾಗಿದ ಮೆಟ್ರೋ ರೈಲು
ಆ DNA ಇರುವ ವ್ಯಕ್ತಿಯನ್ನ ಸಿಎಂ ಮಾಡಲು ಹೊರಟಿದ್ದಾರೆ ಅಂತ ನಾನು ಹೇಳಿದ್ದು. ಅದಕ್ಕೆ ಯಾಕೆ ಇಷ್ಟು ಗಾಬರಿ. ಈ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಈ ಭಾಗದ ಬ್ರಾಹ್ಮಣರು ಸರ್ವೇ ಜನಃ ಸುಖಿನೋ ಭವಂತು ಅಂತಾರೆ. ಪೇಶ್ವೆ ಸಮಾಜ, ಸರ್ವೇ ಜನೋ ನಾಶೋ ಭವಂತು ಅಂತಾರೆ. ಇದು ಅವರ ಪಾಲಿಸಿ. ನನ್ನ ರಾಜ್ಯ ಉಳಿಯಬೇಕು. ಬ್ರಾಹ್ಮಣ ಮಹಾ ಸಮಾಜಕ್ಕೆ ಮನವಿ ಮಾಡ್ತೀನಿ, ಈ ಸಮಾಜಕ್ಕೆ ನಾನು ಸಿಎಂ (CM) ಆದಾಗ ಜಾಗ ಕೊಟ್ಟಿದ್ದೇನೆ. ಅಭಿವೃದ್ಧಿ ಪ್ರಾಧಿಕಾರ ಮಾಡಿ ಹಣ ಕೊಟ್ಟಿದ್ದೇನೆ. ನಾನು ವ್ಯಕ್ತಿಯ ಬಗ್ಗೆ ಚರ್ಚೆ ಮಾಡಿರೋದೇ ಹೊರತು ಸಮಾಜದ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : – ಬೆಂಗಳೂರಿನ ಗಾಂಧಿನಗರದಲ್ಲಿ ಬಿಜೆಪಿ ನಾಯಕ ಬಿ.ಎಸ್ ಸೋಮಶೇಖರ್ ಶ್ರೀನಿವಾಸ್ ಕಲ್ಯಾಣೋತ್ಸವ