ಬೆಂಗಳೂರು : ಕಿರುಕುಳ ಕೊಡಲು ಬಹಳ ದೊಡ್ಡ ದೊಡ್ಡ ಜನ ಇದ್ದಾರೆ. ನನಗೆ ಎಲ್ಲವೂ ಗೊತ್ತಿದೆ, ಅವರು ಏನು ಬೇಕಾದರೂ ಮಾಡಲಿ ಎಂದು ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಸಿಬಿಐ ನೋಟೀಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಲೆಕ್ಕಾಚಾರ ನೋಟೀಸ್ ಕೊಡುತ್ತಿದ್ದಾರೋ ಗೊತ್ತಿಲ್ಲ. ಎಲ್ಲಾ ದಾಖಲೆಗಳು ಅವರ ಬಳಿಯಿವೆ. ಸರ್ಕಾರ ಈ ಕೇಸ್ ವಿತ್ ಡ್ರಾ ಮಾಡಿದೆ. ವಿತ್ ಡ್ರಾ ಮಾಡಿದ ಮೇಲೆ ಎಲ್ಲ ವಾಪಸ್ ಲೋಕಾಯುಕ್ತಕ್ಕೆ ಕೊಡಬೇಕು ಎಂಬುದು ನನಗಿರುವ ಜ್ಞಾನ. ನಾನು ವಕೀಲ ಅಲ್ಲ, ಆದರೂ ನನಗಿರುವ ಜ್ಞಾನ. ಕಿರುಕುಳ ಕೊಡಲು ಬಹಳ ದೊಡ್ಡ ದೊಡ್ಡ ಜನ ಇದ್ದಾರೆ. ನನಗೆ ಎಲ್ಲವೂ ಗೊತ್ತಿದೆ, ಅವರು ಏನು ಬೇಕಾದರೂ ಮಾಡಲಿ. ನನ್ನ ರಾಜಕೀಯವಾಗಿ ಮುಗಿಸಬೇಕು, ತೊಂದರೆ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ನನ್ನ ಜೈಲಿಗೆ ಕಳಿಸುತ್ತೇವೆ ಎಂದು ಕೆಲ ಬಿಜೆಪಿ ನಾಯಕರು ಭವಿಷ್ಯ ನುಡಿದ್ದರು.
ಯಾರು ಮಾತಾಡಿದ್ರು ಅವರಿಗೆ ಬನ್ನಿ ಚರ್ಚೆ ಮಾಡೋಣ ಎಂದು ಕರೆದಿದ್ದೆ. ಬಹಳ ದೊಡ್ಡ ಪ್ಲಾಂಟೋ ನಡೆಯುತ್ತಿದೆ. ನಾನೇನು ತಪ್ಪು ಮಾಡಿಲ್ಲ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆ ಎಂದರು ಇನ್ನೂ
ಖಾಸಗಿ ವಾಹಿನಿಯಲ್ಲಿ ಹೂಡಿಕೆ ವಿಚಾರವಾಗಿ ಸಿಬಿಐ ನೋಟೀಸ್ ವಿಚಾರವಾಗಿ ಮಾತನಾಡಿ ಅವರಿಗೆ ಒಳಗೆ ಆಗಬೇಕು ಎಂಬ ಆಸೆ ಇದ್ದರೆ ನಾನು ರೆಡಿ ಇದ್ದೇನೆ. ನನ್ನ ಪಾಲುದಾರಿಕೆ ಹೊಂದಿರುವ ಸಂಸ್ಥೆಗೆ ನೋಟೀಸ್ ಬಂದಿದೆ. ನನ್ನ ಮಕ್ಕಳಿಗೂ , ನನ್ನ ಹೆಂಡತಿ ಸೇರಿದಂತೆ ನನ್ನ ಕುಟುಂಬದ ರನ್ನು ಕೇಳುತ್ತಿದ್ದಾರೆ. ನಮ್ಮ ಊರು ಯಾವುದಾದರೂ ಸೊಸೈಟಿಗೆ ನಿರ್ದೇಶಕರಾಗಿದ್ದವರಿಗೂ ಕೇಳುತ್ತಿದ್ದಾರೆ. ಮೊದಲು ಸಂಸ್ಥೆಗಳನ್ನು ಮುಗಿಸಿಕೊಂಡು ವೈಯಕ್ತಿಕವಾಗಿ ಬರ್ತಾರೆ. ಅವರು ಏನು ಬೇಕಾದರೂ ಮಾಡಲಿ.
ಅದಕ್ಕೆ ಏನು ಉತ್ತರ ಕೊಡಬೇಕು ಕೊಡುತ್ತೇನೆ. ಅವರಿಗೆ ಒಳಗೆ ಹಾಕಬೇಕು ಎಂಬ ಆಸೆ ಇದ್ರೆ ನಾನು ರೆಡಿಯಾಗಿದ್ದೇನೆ
ವರದಿ : ಬಸವರಾಜ ಹೂಗಾರ