ಕಲಬುರಗಿ: ನಗರದ ಮಾಲಗತ್ತಿ ಗ್ರಾಮದ ರಸ್ತೆಯಲ್ಲಿರೋ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿಯೇ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಮುಖ್ಯೋಪಾಧ್ಯಾಯ ಜೋಹರಾ ಜುಬೀನ್ ಅವರು ಮಕ್ಕಳ ಕೈನಲ್ಲಿ ಕೆಲಸ ಮಾಡಿಸಿದ್ದಾರೆ ಎಂದು ಪೋಷಕರ ಆರೋಪ ಮಾಡಿದ್ದಾರೆ ಅಲ್ಲದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ಜೋಹರಾ ಜುಬೀನ್ ಅವರು ಕೆಲ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಶೌಚಾಲಯ ಸ್ವಚ್ಚಪಡಿಸಿ, ಕೆಲ ವಿದ್ಯಾರ್ಥಿಗಳನ್ನ ಮನೆಗೆ ಕರೆದುಕೊಂಡು ಹೋಗ್ತಿದ್ದಾರೆ ಅಲ್ಲದೇ ಕೆಲಸಕ್ಕೆ ನಿರಾಕರಿಸಿದರೆ ಬಯ್ಯೋದು ಹೊಡೆಯೊದು ಮಾಡಿದ್ದಾರೆ. ನಿನ್ನೆ ಶನಿವಾರ ವಿದ್ಯಾರ್ಥಿಯೊಬ್ಬನನ್ನು ಶಾಲೆ ಬಿಟ್ಟ ನಂತರ ಬಲವಂತದಿಂದ ಮನೆಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿಯಿಂದ ತಮ್ಮ ಮನೆಯ ಗಾರ್ಡನ್ ಸ್ವಚ್ಚಗೊಳಿಸಿದ್ದಾರೆ, ಅಲ್ಲದೇ ಆ ವಿದ್ಯಾರ್ಥಿ ಕೆಲಸ ಮಾಡದಿದ್ದರೆ ಬಟ್ಟೆ ಬಿಚ್ಚಿ ಹೊಡೆಯುವುದಾಗಿ ಮುಖ್ಯ ಶಿಕ್ಷಕಿ ಬೆದರಿಕೆ ಹಾಕಿರುವುದಾಗಿ ವಿದ್ಯಾರ್ಥಿ ಆರೋಪ ಮಾಡಿದ್ದಾರೆ.
ಮಗನಿಂದ ಮನೆ ಕೆಲಸ ಮಾಡಿಸಿಕೊಂಡಿರುವುದನ್ನು ಪ್ರಶ್ನಿಸಿದ ಪೋಷಕರ ಮೇಲೆ ಮುಖ್ಯ ಶಿಕ್ಷಕಿ ಪತಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಕಲಬುರಗಿ ಗ್ರಾಮದ ರಸ್ತೆಯಲ್ಲಿರೋ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮಕ್ಕೆ ಪೋಷಕರ ಆಗ್ರಹಿಸಿದ್ದಾರೆ. ಈ ಘಟನೆ ಸಂಬಂಧಿಸಿ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ