ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗ ಹಿನ್ನೆಲೆ ಘಟಪ್ರಭಾ ನದಿ ಬತ್ತಿಹೋಗಿದೆ. ಈ ನಿಟ್ಟಿನಲ್ಲಿ ಗೋಕಾಕ್ನ ನಲ್ಲಾನಟ್ಟಿ ಗ್ರಾಮದಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮಗೊಂಡಿದೆ ಎಂದು ವರದಿಯಾಗಿದೆ.
ಏಕಾಏಕಿ ಮಳೆ ಬಾರದೇ ಇರೋದ್ರಿಂದ ಬತ್ತಿ ಹೋದ ನದಿಯಲ್ಲಿ ಮೀನುಗಳ ಸಾವಿನಿಂದ ದುರ್ವಾಸನೆ ತುಂಟಾಗಿದೆ. ಇದರಿಂದಾಗಿ ನದಿಯ ಹತ್ತಿರ ಹೋಗುವುದಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೇ ಬಳೋಬಾಳ, ಬೀರನಗಟ್ಟಿ ಗ್ರಾಮಗಳಲ್ಲೂ ಮೀನುಗಳು ವಿಲವಿಲ ಒದ್ದಾಡಿ ಸಾವನಪ್ಪಿದೆ. ಸತ್ತ ಮೀನುಗಳ ಸೇವನೆ ಮಾಡಿದ್ರೆ ರೋಗ ಬರುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಕುಡಿಯಲು ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಾಗಿ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.