ಬೆಂಗಳೂರು : ರಾಮ ದೇವರೇ ಅಲ್ಲದ ಮನುಷ್ಯ ಸಹಜ ಆದರ್ಶಪುರುಷ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಇದ್ದಕ್ಕಿದ್ದ ಹಾಗೇ ರಾಮಯಣ ಮಾಡಲು ಹೊರಟಿದ್ದಾರೆ.
ರಾಮಾಯಣ ಆದರ್ಶದ ರೀತಿ ಇವರ ವರ್ತನೆ ಇದೆಯಾ..? ೩೦೦ ಕೋಟಿ ಸರಯೂ ನದಿಯ ಕ್ಲೀನಿಂಗ್ ಗೆ ಕೊಟ್ಟಿದ್ದು ಕಾಂಗ್ರೆಸ್. 24 ಸಾವಿರ ರಾಮಾಯಣದ ಶ್ಲೋಕಗಳಿವೆ. ರಾವಣನಿಗೆ ದೇವತೆಗಳಿಂದಾಗಲಿ ಸಾವಿಲ್ಲ ಎಂದು ಶ್ಲೋಕದಲ್ಲಿಯೇ ಇದೆ. ಎಲ್ಲಿಯೂ ಸಹ ರಾಮ ದೇವರಾಗಿ ಕಾಣಿಸಿಕೊಂಡಿಲ್ಲ.
ರಾಮ ದೇವರೇ ಅಲ್ಲದ ಮನುಷ್ಯ ಸಹಜ ಆದರ್ಶಪುರುಷ. ರಾಮ ಎಲ್ಲಿಯೂ ಸಹ ದೇವರ ಸ್ಥಾನ ಬಯಸಿದವರಲ್ಲ. ಕೇವಲ ರಾಜಕೀಯ ಕಾರಣಕ್ಕೋಸ್ಕರ ಮಾತ್ರ ಬಳಸಲಾಗುತ್ತಿದೆ. ರಾಮ ಬಯಸಿದ್ದು ದೇವರ ಸ್ಥಾನ ಅಲ್ಲ, ರಾಮ ಬಯಸಿದ್ದು ಕೇವಲ ಆದರ್ಶಗಳನ್ನು ಮಾತ್ರ ಎಂದರು.
ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರು ಹಿರಿಯರು ಇದ್ದಾರೆ, ಅವರಿಗೆ ಮಾಹಿತಿ ಇರಬಹುದು. ನನಗೆ ಮಾಹಿತಿಯಿಲ್ಲ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಏನು ಬೇಕಾದರೂ ಮಾಡಬಹುದು. ಬಿ ಬಿಜೆಪಿ ಅಚರು ವಿಚಿದ್ರಕಾರಿಗಳು. ಸಮಯ ಸಾಧಕರು, ರಾಜಕೀಯ ಕುತಂತ್ರಿಗಳು.ಇದಕ್ಕೆ ಉದಾಹರಣೆಗೆ ಹುಬ್ಬಳ್ಳಿ ಪ್ರಕರಣ ಎಂದು ಹೇಳಿದರು.
ವರದಿ :ಬಸವರಾಜ ಹೂಗಾರ