ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಗೆ ಜನರ ವಿಚಾರವನ್ನು ಬೇರೆ ಕಡೆ ಸೆಳೆಯುವಂತ ಕಲೆ ಎಲ್ಲಾ ರಾಜಕಾರಣಿಗಳಿಗಿಂತ ಚೆನ್ನಾಗಿ ಗೊತ್ತಿದೆ ಎಂದು ಗದಗದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್(CC.Patil) ಹೇಳಿದ್ದಾರೆ. ನೇಕಾರರು ತಾವು ನೇಯುವ ಬಟ್ಟೆಗಳಿಗೆ ಬಣ್ಣ ಕೂಡದಿದ್ದರೆ ನೀಲಕೆಟ್ಟ ಸುದ್ದಿ ಅಂತಾ ಹಬ್ಬಿಸುತ್ತಿದ್ರು.
ಹಾಗೆ ಇದೂ ಒಂದು ರೀತಿ ನೀಲಕೆಟ್ಟ ಸುದ್ದಿ. ಪ್ರಹ್ಲಾದ್ ಜೋಶಿ (Pralhad joshi) ಸಾಧನೆಗಳ ಮೂಲಕ ಈ ಹಂತಕ್ಕೆ ಬಂದಿದ್ದಾರೆ, ಜಾತಿಯಿಂದ ಬಂದಿಲ್ಲ. ಸತತವಾಗಿ ನಾಲ್ಕು ಬಾರಿ ಚುನಾಯಿತರಾಗಿದ್ದಾರೆ. ಪ್ರತಿ ದಿನ ಪ್ರಧಾನಮಂತ್ರಿಗಳ ಜೊತೆಗೆ ಗೃಹ ಸಚಿವರ ಜೊತೆಗೆ ರಿಯಾಕ್ಟ್ ಮಾಡೋವಂತಹ ಪ್ರಮುಖವಾದ ಖಾತೆ. ಅಂತಹ ಖಾತೆಗೆ ಬರಬೇಕಾದ್ರೆ ಜಾತಿಯಿಂದ ಬರಲು ಸಾಧ್ಯವಿಲ್ಲ. ಜಾತಿಯಿಂದ ಬರೋದು ಅವರ ಪಕ್ಷದಲ್ಲಿದೆ, ನಮ್ಮ ಪಕ್ಷದಲ್ಲಿ ಸಾಮರ್ಥ್ಯನೇ ಮುಖ್ಯ. ಕುಮಾರಸ್ವಾಮಿಯವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಅವಶ್ಯಕತೆ ಇಲ್ಲ. ಇದನ್ನೂ ಓದಿ : – ಬಿಜೆಪಿ ಹಿನ್ನೆಲೆ ಆರೋಪ- ಸುಪ್ರೀಂನಲ್ಲಿ ಅರ್ಜಿ ವಜಾ, ಜಡ್ಜ್ ಆಗಿ ಗೌರಿ ಪ್ರಮಾಣವಚನ
ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ಹಾಸನ (Hassan) ದ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದರ ಬಗ್ಗೆ ವಿಚಾರ ಮಾಡೋದು ಒಳ್ಳೇದು. ಜಾತಿ ಮೂಲವನ್ನು ಕೆಣಕಬಾರದು, ನಾನೇನು ಪಂಚಮಸಾಲಿಯಲ್ಲಿ ಹುಟ್ಟಬೇಕು ಅಂತಾ ಬೇಡಿಕೊಂಡು ಬಂದಿದ್ದೆನಾ. ಕುಮಾರಸ್ವಾಮಿ ಒಕ್ಕಲಿಗ ಜಾತಿಯಲ್ಲಿ ಹುಟ್ಟಬೇಕು ಅಂತಾ ಬೇಡಿಕೊಂಡು ಬಂದಿದ್ರಾ ಎಂದು ಸಿಸಿ. ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : – ಹಿಂದೂ ಆದವ ಹಿಂದುತ್ವ ಗೌರವಿಸಲೇಬೇಕು- ಸಿದ್ದರಾಮಯ್ಯ ಹೇಳಿಕೆಗೆ ಸುಬುಧೇಂದ್ರ ತೀರ್ಥ ಶ್ರೀ ತಿರುಗೇಟು