ಬೆಂಗಳೂರು : ನಗರದ ಪದ್ಮನಾಭ ನಗರದ ದೇವೆಗೌಡ ಪೆಟ್ರೋಲ್ ಬಂಕ್ ಬಳಿ ರಾತ್ರಿ ಜಾಲಿ ರೈಡ್ಗೆ ಓರ್ವ ಬಲಿಯಾಗಿದ್ದು, ಮತ್ತೊರ್ವನಿಗೆ ಗಂಭೀರ ಗಾಯಗೊಂಡ ಘಟನ ಬೆಳಕಿಗೆ ಬಂದಿದೆ.
ರಾಮ್ ಕುಮಾರ್( 29) ಮೃತವನು, ಯಶವಂತ (22) ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.ಇಬ್ಬರು ಬ್ಯಾಟರಾಯನಪುರ ಬಳಿಯ ಪ್ರಮೋದ್ ಲೇಔಟ್ ನಿವಾಸದಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ರಾಮ್ ಕುಮಾರ್ ರಾತ್ರಿ 2 ಗಂಟೆಗೆ ಜಾಲಿ ರೈಡ್ ಫ್ಲೈ ಓವರ್ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದಿದ್ದಾನೆ. ತೀವ್ರ ಗಾಯಗೊಂಡ ರಾಮ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ,ರಾಮ್ ಕುಮಾರ್ ಮೃತ ದೇಹ ಕಿಮ್ಸ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಯಶವಂತ ಗಂಭೀರ ಗಾಯಗೊಂಡಿದ್ದಾರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಡ್ರಿಂಗ್ ಅಂಡ್ ಡ್ರೈವ್ ಮಾಡಿರುವ ಬಗ್ಗೆ ಶಂಕಿಸಲಾಗಿದೆ. ಈ ಅಪಘಾತ ಸಂಬಂಧ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ