ಅಯೋಧ್ಯೆ : ಉತ್ತರಪ್ರದೇಶದಲ್ಲಿರುವ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಇಂದು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ರಾಮನಗರಿಯಲ್ಲಿ ಮೋದಿ ಸ್ವಾಗತಕ್ಕಾಗಿ ತಳಿರು ತೋರಣ, ಹೂವಿನ ಅಲಂಕಾರ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ ನಿಲ್ದಾಣ, ಅಭಿವೃದ್ಧಿಗೊಂಡಿರುವ ರೈಲು ನಿಲ್ದಾಣವನ್ನೂ ಮೋದಿ ಉದ್ಘಾಟಿಸಲಿದ್ದಾರೆ. 11 ಸಾವಿರ ಕೋಟಿ ರೂ. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4,600 ಕೋಟಿ ರೂ.ಗಳಷ್ಟು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.
ರಸ್ತೆ, ಹೆದ್ದಾರಿ, ವಿಮಾನ, ರೈಲ್ವೇ ಸೇರಿದಂತೆ ಮೂಲಭೂತ ಸೌಕರ್ಯಗಳ ಯೋಜನೆಗಳು ಒಳಗೊಂಡಿವೆ. ಹೀಗಾಗಿ ಪ್ರಧಾನಿ ಮೋದಿ ಸ್ವಾಗತಕ್ಕೆ ಶ್ರೀರಾಮಜನ್ಮಭೂಮಿ ಸಜ್ಜಾಗಿದೆ. ವಿಶೇಷವೆಂದರೆ ಇದೇ ದಿನ 6 ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹಾಗೂ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.
ಮೋದಿ ಕಾರ್ಯಕ್ರಮಗಳು :
ಬೆಳಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
2183 ಕೋಟಿ ರೂ. ಗ್ರೀನ್ಫೀಲ್ಡ್ ಟೌನ್ಶಿಪ್ಗೆ ಅಡಿಗಲ್ಲು
300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
ನವೀಕರಣಗೊಂಡಿರುವ ನಯಾಘಾಟ್ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್ಘಾಟ್, ರಾಜ್ಘಾಟ್ನಿಂದ ರಾಮ ಮಂದಿರ ರಸ್ತೆ)
ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
ಮಧ್ಯಾಹ್ನ 1 ಗಂಟೆ ಬಳಿಕ ಮೋದಿ ಮೆಗಾ ರೋಡ್ ಶೋ
ಏರ್ಪೋರ್ಟ್ನಿಂದ ಅಯೋಧ್ಯೆ ನಗರದಲ್ಲಿ 15 ಕಿ.ಮೀ. ರೋಡ್ ಶೋ