ಬಿಲಿಯನೇರ್ ಗೌತಮ್ ಅದಾನಿಗೆ (Gautam Adani) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ (Rahul Gandhi) ಹಲವಾರು ಆರೋಪಗಳನ್ನು ಮಾಡಿದ್ದಾರೆ. ಯುಎಸ್ ಇನ್ವೆಸ್ಟ್ಮೆಂಟ್ ಗ್ರೂಪ್ ಹಿಂಡೆನ್ಬರ್ಗ್ ರಿಸರ್ಚ್ ಗುಂಪಿನಿಂದ ಲೆಕ್ಕಪತ್ರ ವಂಚನೆ ಆರೋಪದ ನಂತರ , ಅದಾನಿ ಕಂಪನಿಗಳು ಸುಮಾರು $ 120 ಬಿಲಿಯನ್ ಮೌಲ್ಯವನ್ನು ಕಳೆದುಕೊಂಡಿದೆ.
ವಿವಿಧ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ (Modi) ಗೌತಮ್ ಅದಾನಿ ಅವರ ವ್ಯಾಪಾರ ಸಾಮ್ರಾಜ್ಯಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅದಾನಿ ಜೀ ಅವರು ಸೌರಶಕ್ತಿ, ಪವನ ಶಕ್ತಿಯಲ್ಲಿ ವ್ಯವಹಾರ ಮಾಡಿದ್ದು ಅವರು ಎಂದಿಗೂ ವಿಫಲರಾಗುವುದಿಲ್ಲ. ಅದಾನಿ ಅನೇಕ ಕ್ಷೇತ್ರಗಳಲ್ಲಿ ಅಂತಹ ಯಶಸ್ಸನ್ನು ಹೇಗೆ ಪಡೆದರು? ಪ್ರಧಾನಿಯೊಂದಿಗೆ ಅವರ ಸಂಬಂಧವೇನು ಎಂದು ಭಾರತ್ ಜೋಡೋ ಯಾತ್ರೆ (Bharath jodo yatre) ಯಲ್ಲಿ ಜನರು ನನ್ನಲ್ಲಿ ಕೇಳಿದ್ದರು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ : – ಕುಮಾರಸ್ವಾಮಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳೋದು ಅವಶ್ಯಕತೆ ಇಲ್ಲ – ಸಿ ಸಿ ಪಾಟೀಲ್
ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಲ್ಲಿ ಅದಾನಿ ಗುತ್ತಿಗೆ ಪಡೆದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. “2014 ಮತ್ತು 2022 ರ ನಡುವೆ ಅದಾನಿ ನಿವ್ವಳ ಮೌಲ್ಯವು $ 8 ಶತಕೋಟಿಯಿಂದ 140 ಶತಕೋಟಿಗೆ ಹೇಗೆ ಹೆಚ್ಚಾಯಿತು ಎಂದು ಜನರು ನನ್ನನ್ನು ಕೇಳಿದ್ರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉದ್ಯಮಿ ಅದಾನಿ 600 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಹೋದರು ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ : – ಅದೃಷ್ಟಕ್ಕಾಗಿ ಪಕ್ಷದ ಚಿಹ್ನೆಯನ್ನೇ ಬದಲಿಸಿದ್ರಾ ಡಿಕೆಶಿ? ಚರ್ಚೆಗೆ ಗ್ರಾಸವಾದ ಹಸ್ತದ ಗುರುತು