ಬೆಂಗಳೂರು : ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊಳಿ ನಿವಾಸದಲ್ಲಿ ಬ್ರೇಕ್ ಪಾಸ್ಟ್ ಆಯೋಜನೆ ಮಾಡಿ ಶಾಸಕರ ಜೊತೆ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.ಆಪ್ತ ಶಾಸಕರನ್ನ ಮೈಸೂರಿಗೆ ಟೂರ್ ಗೆ ಕರೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿ ಹೊಳಿ ಅವರು ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಅಂತ ಇತ್ತು. ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳ್ತಿದ್ರು. ಹಾಗೆ ಸಮಾನ ಮನಸ್ಕರು ಹೋಗಬೇಕು ಅಂತ ಇತ್ತು. ಈಗ ದಸರಾ ಹಬ್ಬ ಬೇಡ ಅಂತ ಇದ್ದೇವೆ.
ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೇವೆ. ಇದು ವಿದಿನ್ ದಿ ಪಾರ್ಟಿ, ಯಾವುದೇ ಬಣ ಗಿಣ ಅಂತೇನಲ್ಲ ಎಂದು ಹೇಳಿದರು.ಸತೀಶ್ ಜಾರಕಿ ಹೊಳಿ ನಡೆ ಕುತೂಹಲ ಮೂಡಿಸಿದೆ…
ಇನ್ನೂ ಸತೀಶ್ ಜಾರಕಿ ಹೊಳಿ ಮನೆಯಲ್ಲಿ ಬ್ರೇಕ್ ಪಾಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಪಟ್ಟಣ್ ಸತೀಶ್ ಜಾರಕಿಹೊಳಿ ಮನೆಗೆ ನಾನು ಹೋಗಿದ್ದೆ. ನನಗೇನು ಅವರು ಕರೆದಿರಲಿಲ್ಲ ನಾನು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ತೆರಳಿದ್ದೆ. ನನಗೆ ತಿಂಡಿ ತಿಂದಿಲ್ವಾ ಅಂತ ಕೇಳಿದ್ರು, ನಾನು ಇಲ್ಲ ಅಂದೆ ಬನ್ನಿ ತಿಂಡಿ ತಿನ್ನು ಅಂದ್ರು. ಅದೇ ಸಮಯದಲ್ಲಿ ಕಂಪ್ಲಿ ಗಣೇಶ್ ಅವರದ್ದೇನೋ ಸಮಸ್ಯೆ ತಗೆದುಕೊಂಡು ಬಂದಿದ್ದರು. ಅಲ್ದೇ ಜಿಟಿ ಪಾಟೀಲ್ ಸೇರಿದಂತೆ ಐದಾರು ಜನ ಶಾಸಕರು ಬಂದಿದ್ದರು ಅಷ್ಟೇ ಎಂದರು.
ಇನ್ನೂ ಮೈಸೂರು ದಸರಾ ಗೆ ತೆರಳುವ ವಿಚಾರ ನನಗೆ ಗೊತ್ತಿಲ್ಲ. ಹಂಗೇನಾದ್ರು ಇದ್ರೆ ಹೇಳಿ ಹೇಳ್ತಾರೆ ಅದ್ರಲ್ಲಿ ಮುಚ್ಚು ಮರೆ ಎಂಥದ್ದು. ಮೈಸೂರು ಹೋಗೋದು ಕ್ಯಾನ್ಸಲ್ ಆಗಿದ್ರೆ, ಕ್ಯಾನ್ಸಲ್ ಆಗಿದೆ ಎಂದು ನಾನೇ ಹೇಳ್ತಿದ್ದೆ. ನಮ್ಗೆನು ಮೈಸೂರಿಗೆ ಕರೆದಿಲ್ಲ.. ಮೈಸೂರು ಹೋಗಬೇಕು ಅಂತಿದ್ರೆ ಹೋಗೇ ಹೋಗ್ತಿವಿ. ಅದ್ರಲ್ಲೇನು ರಾಜಕೀಯ ಇಲ್ವೇ ಇಲ್ಲ. ದಸರಾ ನಡೀತಿದೆ ನಮ್ಮ ಪಾಡಿಗೆ ನಾವು ಹೊಗಿಬರ್ತಿದಿವಿ ಅದ್ರಲ್ಲೇನು ಮುಚ್ಚು ಮರೆ ಇಲ್ಲ. ಬೆಳಗ್ಗೆ ಹೋಗಿದ್ದು ನಿಜ ನಾವು ತಿಂಡಿ ತಿಂದು ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ವಾಪಸ್ ಬಂದ್ವಿ. ನನ್ನ ಪ್ರಕಾರ ಯಾರು ಮೈಸೂರು ಗೆ ಹೋಗಿಲ್ಲ ಎಂದು ಹೇಳಿದರು.