ಲಕ್ನೋ: ಉತ್ತರಪ್ರದೇಶದ ಫತೇಪುರ್ ಸಿಕ್ರಿ ನತ್ತು ಖೇರಗಢ್ನಲ್ಲಿರುವ ಕುಶಲಕರ್ಮಿಗಳು ದೇಗುಲದಲ್ಲಿ ಬಳಸುವ ಕೆಂಪು ಮರಳುಗಲ್ಲಿನ ಮೇಲೆ ಕೆತ್ತನೆಗಳನ್ನು ರಚಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕುಶಲಕರ್ಮಿಗಳಲ್ಲಿ ಮುಸ್ಲಿಮರು ಕೂಡ ಇದ್ದಾರೆ. ಈ ಮೂಲಕ ರಾಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಕೂಡ ಸಹಕರಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ ರಾಮಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಗಮನಾರ್ಹರಾಗಿದ್ದಾರೆ.
ಈ ಕುಶಲಕರ್ಮಿಗಳಲ್ಲಿ ಹಲವಾರು ಮುಸ್ಲಿಂಮರು ತಮ್ಮ ಕಲೆಯನ್ನು ರಾಮಮಂದಿರ ನಿರ್ಮಾಣದಲ್ಲಿ ಬಳಸುತ್ತಿದ್ದಾರೆ. ಇದು ನಮಗೆ ಹೆಮ್ಮೆ ಅನಿಸ್ತದೆ ಎಂದು ದೇವಾಲಯದಲ್ಲಿ ಸ್ಥಾಪಿಸಲಾಗುವ ಕಂಬಗಳನ್ನು ಕೈಯಿಂದ ಕೆತ್ತುತ್ತಿರುವ ಕುಶಲಕರ್ಮಿಗಳಲ್ಲಿ ಒಬ್ಬರಾದ ಮುಸ್ಲಿಂ ವ್ಯಕ್ತಿ ತಿಳಿಸಿದ್ದಾರೆ.
ಇಲ್ಲಿರುವ ನೂರಾರು ಕಂಬಗಳಲ್ಲಿ ಮೂಡಿ ಬರುವ ಕೆತ್ತನೆಗಳಲ್ಲಿ ಇವರ ಕೆತ್ತನೆಯ ಕೆಲಸಗಳು ಅಡಕವಾಗಿವೆ. ಹೀಗಾಗಿ ಅವರು ಇದು ನಮಗೆ ಒದಗಿ ಬಂದಿರುವ ಸೌಭಾಗ್ಯ, ನಮ್ಮ ಅದೃಷ್ಟ ಎಂದು ಹೇಳುತ್ತಿದ್ದಾರೆ.