6 ವರ್ಷ ಕಳೆದರೂ ಸಾರಿಗೆ ನೌಕರ (Transport employee) ರಿಗೆ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ. ಕಳೆದ ಒಂದು ವಾರದ ಹಿಂದೆ ಸರ್ಕಾರದ ವೇತನ ಹೆಚ್ಚಿಸಲು ಆಗ್ರಹಿಸಿ ನೌಕರರು ಧರಣಿ ನಡೆಸಿದ್ದರು. ಆದ್ರೂ ಕ್ಯಾರೇ ಅನ್ನದ ಸರ್ಕಾರದ ಧೋರಣೆ ಖಂಡಿಸಿ ಮತ್ತೆ ಬೀದಿಗಿಳಿಯಲು ತೀರ್ಮಾನ ಮಾಡಿದ್ದಾರೆ.
ಫೆಬ್ರವರಿ (Febraury) ೮ ರಂದು ಸಾರಿಗೆ ನೌಕರರಿಂದ ಸರ್ಕಾರದ ಗಮನ ಸೆಳೆಯಲು ಬೃಹತ್ ಧರಣಿ ಸತ್ಯಾಗ್ರಹ (Protest) ನಡೆಯಲಿದೆ. ನಾಲ್ಕು ನಿಗಮದ ನೌಕರರಿಂದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021 ರ ಏಪ್ರಿಲ್ ನಲ್ಲಿ 15 ದಿನಗಳ ಕಾಲ ನೌಕರರು ಮುಷ್ಕರ ನಡೆಸಿದ್ದರು. ಆದ್ರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಮತ್ತೆ ಮಂಗಳವಾರ ಧರಣಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ : – ಬಿಜೆಪಿಯವರು ರಥ ಯಾತ್ರೆಯಾದ್ರೂ ಮಾಡಲಿ, ಹೆಲಿಕಾಪ್ಟರ್ ಯಾತ್ರೆನಾದ್ರೂ ಮಾಡಲಿ – ಡಿ.ಕೆ ಶಿವಕುಮಾರ್
ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಇಲ್ಲ. ಸಾರಿಗೆ ನಿಗಮಗಳ ನಿರ್ಲಕ್ಷ್ಯ ನಡೆಯಿಂದ ಬೇಸತ್ತು ಮತ್ತೆ ಮಂಗಳವಾರ ನೌಕರರು ಧರಣಿಗೆ ತೀರ್ಮಾನ ಮಾಡಿದ್ದಾರೆ.
ಇದನ್ನೂ ಓದಿ : – ಶ್ರೀಮಂತ ಪಟ್ಟದಿಂದ 22ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ