ನೆರೆಯ ತಮಿಳುನಾಡಿ (THAMIL NADU) ನಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ರಾಜ್ಯ ತತ್ತರಿಸಿ ಹೋಗಿದೆ. ಬುಧವಾರ ರಾತ್ರಿ ನಾಗಪಟ್ಟಣಂ (NAGAPATANNAM)ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಿರುವರೂರು ಜಿಲ್ಲೆಯಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
https://twitter.com/Indiametdept?ref_src=twsrc%5Etfw%7Ctwcamp%5Etweetembed%7Ctwterm%5E1620890753638727680%7Ctwgr%5E2a20a9cf7a1b5b512e20889d2f57cce03260f2c3%7Ctwcon%5Es1_&ref_url=https%3A%2F%2Fpublictv.in%2Funseasonal-rains-in-tamil-nadu-school-holidays-in-nagapattinam%2F
ಭಾರತೀಯ ಹವಾಮಾನ ಇಲಾಖೆ ಟ್ವೀಟ್ ನಲ್ಲಿ ಈ ಬಗ್ಗೆ ತಿಳಿಸಿದ್ದು, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ, ಶ್ರೀಲಂಕಾ ಕರಾವಳಿಯಿಂದ 80 ಕಿಮೀ ದೂರದಲ್ಲಿ ಮತ್ತು ತಮಿಳುನಾಡಿನ ಕಾರೈಕಲ್ನಿಂದ 400 ಕಿಮೀ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಹೇಳಿದೆ. ಇದನ್ನುಓದಿ :- ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ- ಬ್ಯಾಂಕ್ ಗಳಿಂದ ವಿವರ ಕೇಳಿದ RBI
— Tamilnadu Weather-IMD (@ChennaiRmc) February 1, 2023
ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ಇಂದು ಬೆಳಗ್ಗೆ, ದಕ್ಷಿಣ ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ 1-2 ಕಡೆಗಳಲ್ಲಿ ಫೆಬ್ರವರಿ 2 ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇದನ್ನುಓದಿ :- ಫೆ.11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಅಮಿತ್ ಶಾ ಭೇಟಿ…!