ಬೆಂಗಳೂರು : ನಾವು ಅಯೋಧ್ಯೆ ವಿರುಧ್ಧ ಇಲ್ಲ, ದೇವಸ್ಥಾನ ಕಟ್ಟುವುದಕ್ಕೆ ವಿರುದ್ದ ಇಲ್ಲ, ರಾಮ ಮಂದಿರಕ್ಕೂ ವಿರುದ್ದವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಪ್ರೆಸ್ ಕ್ಲಬ್ ನಲ್ಲಿ ಶ್ರೀ ರಾಮ್ ಮಂದಿರ ಉದ್ಘಾಟನೆ ವಿಚಾರಗಿ ಮಾತಾನಾಡಿದ ಅವರು ನಾವು ಅಯೋಧ್ಯೆ ವಿರುಧ್ಧ ಇಲ್ಲ, ದೇವಸ್ಥಾನ ಕಟ್ಟುವುದಕ್ಕೆ ವಿರುದ್ದ ಇಲ್ಲ, ರಾಮ ಮಂದಿರಕ್ಕೂ ವಿರುದ್ದವಿಲ್ಲ. ನಾವೂ ನಮ್ಮ ಹಳ್ಳಿಯಲ್ಲಿ ಭಜನೆ ಮಾಡ್ತಿದ್ದೆವು. ರಾಮ ಮಂದಿರ ಕಟ್ಟಿರುವುದು ಬಹಳ ಸಂತೋಷ ಎಂದರು.
ಇನ್ನೂ ಪ್ರತಾಪ್ ಸಿಂಹ ಸಹೋದರ ಬಂಧನ ರಾಜಕೀಯವಾಗಿ ಬಂಧನ ಮಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ನಿರಪರಾಧಿಗಳಿಗೆ ಯಾರಿಗೂ ತೊಂದರೆ ಆಗಲು ಬಿಡಲ್ಲ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಶಿಕ್ಷೆ ಆಗತ್ತೆ..? ತಪ್ಪು ಮಾಡದವರ ಮೇಲೆ ಯಾಕೆ ಕ್ರಮ ಆಗತ್ತೆ. ಏನೇ ಮಾಡಿದರೂ ನಮ್ಮ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಇನ್ನೂ ದೆಹಲಿಗೆ ಹೋಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಎಐಸಿಸಿ ನಾಯಕರು ದೆಹಲಿಗೆ ಕರೆದಿದ್ದಾರೆ. ಲೋಕಸಭೆ ವಿಚಾರ ಚರ್ಚೆ ಮಾಡ್ತೀವಿ ಅಂದುಕೊಂಡಿದ್ದೇನೆ. ನಿಗಮ ಮಂಡಳಿಗೆ ಎಂಎಲ್ಎಗಳನ್ನು ಮಾತ್ರ ಮೊದಲ ಹಂತ ದಲ್ಲಿ ಮಾಡೋಣ ಅಂದುಕೊಂಡಿದ್ದೆವು.
ಈಗ ಕಾರ್ಯಕರ್ತರನ್ನೂ ಮಾಡಬೇಕು ಅಂತ ಹೇಳಿದ್ದಾರೆ. ಕಾರ್ಯಕರ್ತರ ಪಟ್ಟಿ ಕೂಡ ಮಾಡ್ತಿದ್ದೇವೆ ಎಂದರು ೨೦೨೪ ಸುಖ ಶಾಂತಿ ಸಮೃದ್ದಿ ತರಲಿ ಅಂತ ಬಯಸುತ್ತೇನೆ ಎಂದು ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಷಯ ತಿಳಿಸಿದರು.
ವರದಿ : ಬಸವರಾಜ ಹೂಗಾರ