ಬೆಂಗಳೂರು : ರಾಜ್ಯದಲ್ಲಿ ರಿಯಾಲಿಟಿ ಶೋ ನಲ್ಲಿ ಹುಲಿ ಉಗುರಿನ ಆಭರಣ ಹಾಕಿಕೊಂಡಿರುವ ವ್ಯಕ್ತಿ ಬಗ್ಗೆ ಚರ್ಚೆ ಆಗಿದೆ. ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಡಿ ಚರ್ಮದ ಉಗುರಿನ ಪೆಂಡೆಂಟ್ ಧರಿಸುವುದು ಶಿಕ್ಷಾರ್ಹ ಅಪರಾಧ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಪ್ರಾಣಿಗಳ ರಕ್ಷಣೆ ಮಾಡುವುದಕ್ಕಾಗಿ ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿಯಲ್ಲಿ ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲಾಗುವುದಲ್ಲದೇ, ಮುಂದಿನ ತನಿಖೆಯನ್ನು ಮಾಡಲಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಜೊತೆಗೆ ಹಲವಾರು ದೂರುಗಳು ದಾಖಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಸಿಎಂ ಜೊತೆಗೂ ಚರ್ಚೆ ಮಾಡಿದ್ದೇನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಠಿಣ ಕಾಯ್ದೆಯಾಗಿದೆ. ಈ ಕಾಯ್ದೆ ಬಗ್ಗೆ ಜನರಿಗೆ ಭಯ ಬೇಡ, ಆದರೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆಅದಕ್ಕಾಗಿ ಒಂದು ಸಮಿತಿ ರಚನೆ ಮಾಡಿದ್ದೇನೆ. ಅವರು ವರದಿ ಬಂದ ಕೂಡಲೇ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ವನ್ಯ ಜೀವಿಗಳಿಗೂ ಬದುಕಲು ಹಕ್ಕು ಇದೆ ಪ್ರಾಣಿಗಳ ಕಳ್ಳ ಬೇಟೆ ಅನೇಕ ಕಡೆ ನಡೀತ್ತಾನೆ ಇರುತ್ತದೆ ಎಂದಿದ್ದಾರೆ.
ರಾಜ್ಯದ ಐದಾರು ಕಡೆ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಹೋಗಿದ್ದಾರೆ. ಗಣ್ಯರು ,ಸೆಲಿಬ್ರಿಟಿಗಳ ಮನೆಗೆ ಹೋಗಿದ್ದಾರೆ. ಅದರಲ್ಲೂ ಜಗ್ಗೇಶ್ ಇಪತ್ತು- ಮೂವತ್ತು ವರ್ಷದ ಹಿಂದೆ ನಮ್ಮ ತಾಯಿ ಕೊಟ್ಟಿದ್ದರು ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಈಗ ಅದನ್ನು ಎಫ್ಎಸ್ ಎಲ್ ಗೆ ಕಳುಹಿಸಿದ್ದೇವೆ. ಕಾನೂನು ಎಲ್ಲರಿಗೂ ಸರಿಸಮಾನವಾಗಿದೆ. ಜಗ್ಗೇಶ್ ಅವ್ರು ಸ್ವಯಂ ಪ್ರೇರಣೆ ಯಿಂದ ಅವ್ರು ನಮಗೆ ತಲುಪಿಸಿದ್ದಾರೆ. ಯಾವುದೇ ರೀತಿಯ ಒತ್ತಡಗಳು ನಮ್ಮ ಅಧಿಕಾರಿಗಳ ಮೇಲೆ ಇಲ್ಲ, ಯಾವುದೇ ತೀರ್ಪು ಕೂಡ ಕಾನೂನಿನ ಪರ ಇದ್ದಾವೆ . ಕಾನೂನು ರೀತಿಯಲ್ಲಿ ಅಧಿಕಾರಿ ಗಳು ತನಿಖೆ ಮಾಡ್ತಾರೆ . ಯಾವುದೇ ಪೆಂಡೆಂಟ್ ಬಂದರೂ ಅದನ್ನು ಲ್ಯಾಬ್ ಗೆ ಕಳುಹಿಸಿದ್ದೇವೆ. ಇಲ್ಲಿವರೆಗೂ 8 ದೂರುಗಳು ಬಂದಿದ್ದೇವೆ ಎಂದಿದ್ದಾರೆ.
ದರ್ಶನ್ ಇರಬಹುದು ಬೇರೆ ಯಾರೇ ಇರಬಹುದು ದೂರುಗಳ ಬಂದಾಗ ಅದರ ಬಗ್ಗೆ ನ್ಯಾಯ ಸಮ್ಮತವಾಗಿ ತನಿಖೆ ನಡೆಯುತ್ತದೆ. ಒಂದೇ ಮಾನದಂಡದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ.ಆದಷ್ಟು ಬೇಗ ಎಫ್ಎಸ್ಎಲ್ ವರದಿ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ ನಕಲಿನೂ ಹಾಕಿಕೊಳ್ಳಬಾರದು, ಅದನ್ನು ಹಾಕಿಕೊಂಡ್ರೆ ಬೇರೆಯವರಿಗೆ ಪ್ರಚೋದನೆ ಮಾಡಿದಂತೆ ಅವಾಗ ಪ್ರಾಣಿಗಳ ಹತ್ಯೆಯ ಪ್ರಯತ್ನ ಗಳು ಆಗ್ತವೆ. ನಕಲಿ ಸಹಿತ ಈ ರೀತಿಯ ಪೆಂಡೆಂಟ್ ಹಾಕಿಕೊಳ್ಳಬಾರದೆಂದು ಮನವಿ ಮಾಡ್ತೀನಿ ಎಂದಿದ್ದಾರೆ.