ಕೊಟ್ಟ ಕುದುರೆ ಏರಲು ಅರಿಯದ ಬಿಜೆಪಿಯವರು, ಇದೀಗ ಮತ್ತೊಮ್ಮೆ ಅಧಿಕಾರದ ಕನಸು ಕಾಣ್ತಿದ್ದಾರೆಂದು ಕೋಲಾರ ಕೆಜಿಎಫ್ ಪ್ರಜಾಧ್ವನಿ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ (DK.Shivakumar) ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಮುಳಬಾಗಿಲು ಸಮಾವೇಶ ನಂತರ ಕೆಜಿಎಫ್ (KGF) ನಗರದ ಮುನ್ಸಿಪಲ್ ಗ್ರೌಂಡ್ ನಲ್ಲಿ ಕೆಜಿಎಫ್ ಶಾಸಕಿ ರೂಪಾಶಶಿಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಉಗ್ರಪ್ಪ, ಕೆ. ಹೆಚ್ ಮುನಿಯಪ್ಪ ಸೇರಿದಂತೆ ಹಲವು ಹಿರಿಯ ಕೈ ನಾಯಕರು ಭಾಗಿಯಾಗಿದ್ರು. ಸಮಾವೇಶದಲ್ಲಿ ಕಡೆಯದಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಕಾಂಗ್ರೆಸ್ (Congress) ಪಕ್ಷದ ಪ್ರಣಾಳಿಕೆಯಂತೆ, ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಹಾಗು ಮನೆ ಯಜಮಾನನಿಗೆ ವಾರ್ಷಿಕ 24 ಸಾವಿರ ಹಣವನ್ನ ನೀಡುವುದಾಗಿ ಘೋಷಿಸಿದ್ರು. ಇನ್ನು ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದ್ದು, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ್ಯ ಪ್ರಧಾನಿಗೆ ಪತ್ರ ಬರೆದ್ರು ಏನೂ ಪ್ರಯೋಜನ ಆಗಿಲ್ಲ. ಸರ್ಕಾರ ಇದ್ದರೂ ಇಲ್ಲದಂತಾಗಿದೆ, ನಾವು ಮಾಡಿದ ರಾಷ್ಟ್ರೀಕರಣವನ್ನ ಇವರು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಇದನ್ನೂ ಓದಿ : – ಸ್ವಪಕ್ಷದ ಕಾರ್ಯಕರ್ತನಿಂದಲೇ ಮಾಜಿ ಸಚಿವರಿಗೆ ತರಾಟೆ
ರಾಜ್ಯದಲ್ಲಿ ಏನೇ ಕೆಲಸ ಮಾಡಿದ್ರು 40 ಪರ್ಸೆಂಟ್ ಹಣ ಕೊಡ್ಲೇಬೇಕು. ವಿಧಾನಸೌಧ (Vidhanasoudha) ದ ಗೋಡೆಗಳು ಕಾಸು ಕಾಸು ಅನ್ನುತ್ತೆ. ಭ್ರಷ್ಟ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಕಳಂಕಿತವಾದ ಕಪ್ಪು ಚುಕ್ಕೆ ಬಂದಿದೆ. ಇಡೀ ರಾಷ್ಟ್ರ ನಮ್ಮ ರಾಜ್ಯದ ಆಡಳಿತ ನೋಡಿ ತಲೆ ತಗ್ಗಿಸುವಂತಾಗಿದೆ. ಅಲ್ಲಮ ಪ್ರಭುಗಳು ಹೇಳಿದಂತೆ ಕೊಟ್ಟ ಕುದುರೆಯನ್ನ ಏರಲು ಅರಿಯದೆ, ಮತ್ತೊಂದು ಕುದುರೆ ಏರಲು ಬಯಸಿದವ ವೀರನು ಅಲ್ಲ ಶೂರನು ಅಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಕೋಲಾರದ ಮಾಲೂರಿಗೆ ಪ್ರಜಾ ಧ್ವನಿ ಯಾತ್ರೆ ಆಗಮನ