ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ಇದೀಗ ಬಳಕೆ ಮಾಡುವವರೇ ಹೆಚ್ಚು, ಎಗ್ಗಿಲ್ಲದೇ ಬಳಕೆ ಮಾಡುವವರು ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ. ಸ್ವಲ್ಪ ಯಾಮಾರಿದ್ರೂ ಕೇಸ್ ಬೀಳುವುದು ಗ್ಯಾರಂಟಿ ಇಲ್ಲೊಂದೆಡೆ ವಾಟ್ಸಾಪ್ ಪ್ರೊಫೈಲ್ನಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಫೋಟೋ ಹಾಕಿದ ವ್ಯಕ್ತಿಯೊಬ್ಬ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ವಾಟ್ಸಾಪ್ನಲ್ಲಿ ಔರಂಗಜೇಬ್ ಚಿತ್ರ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು ಸ್ಕ್ರೀನ್ಶಾಟ್ನ್ನು ಪೊಲೀಸರಿಗೆ ನೀಡಿ, ದೂರು ದಾಖಲಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿ,ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ ಮಾಡಲಾಗಿದೆ.
ಅಲ್ಲದೇ ಐಪಿಸಿ ಸೆಕ್ಷನ್ 298 ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು 153 ಎ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಪ್ರಕರಣನಡಿ ಮುಂಬೈನಲ್ಲಿ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ ಎಂದು ತಿಳಿಯಲಾಗಿದೆ.