ಬೆಳಗಾವಿ : ಬೆಳಗಾವಿ ಅಧಿವೇಶನದಲ್ಲಿ ಕಾಲ ಹರಣ ವಿಚಾರಕ್ಕೆ ಸಚಿವ ತಿಮ್ಮಾಪೂರ (Minister Thimmapura) ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಸಚಿವ ಆರ್ ಬಿ ತಿಮ್ಮಾಪೂರ ಮಾತನಾಡಿ, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತದೆ. ವಿಶೇಷವಾಗಿ ಮುಳುಗಡೆ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ.ನಮ್ಮ ಸಿಎಂ ಅವರ ಜೊತೆ ನಾವು ಇದ್ದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡ್ತೇವೆ. ಈಗಾಗಲೇ ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆ ಆಗ್ತಿವೆ. ಬೆಳಗಾವಿ ಅಧಿವೇಶನದಲ್ಲಿ ಅದು ಕೊನೆ ಗಳಿಗೆಯಲ್ಲಿ ಆಗ್ತಿದೆ ಅನ್ನೋದು ನಿಮ್ಮ ವಾದ. ಸಿಎಂ ಅವರಿಗೆ ಹೇಳಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನ ಆರಂಭದಲ್ಲೆ ಚರ್ಚೆ ಮಾಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.