ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ನೂತನ ವಿಧಾನಸಭಾ ಕ್ಷೇತ್ರವಾದ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನವನ್ನು ಕಂದಾಯ ಸಚಿವ ಆರ್. ಅಶೋಕ್ (R.Ashok) ಘೋಷಣೆ ಮಾಡಿದ್ದಾರೆ. ಸಚಿವ ಡಾ. ಕೆ. ಸುಧಾಕರ್ (K.Sudhakar) ಮನವಿ ಮೇರೆಗೆ ಸ್ಥಳದಲ್ಲೇ ಅನುದಾನ ಘೋಷಿಸಿದರು.
ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, 79 ಎ.ಬಿ ನಿಯಮ ತೆಗೆದು ಹಾಕಿದ್ದೇನೆ. ಅಧಿಕಾರಿಗಳು 79 ಎ, ಬಿ ಇಟ್ಟುಕೊಂಡು ಕಿರುಕುಳ ಕೊಡುತ್ತಿದ್ದರು. 94ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ನೊಂದಣಿ ಮಾಡಲಾಗಿದೆ. ಸದ್ಯ 10 ಸಾವಿರ ಜನರಿಗೆ 94ಸಿಯಿಂದ ಅನುಕೂಲವಾಗಿದ್ದು, ರೈತರ ಜಮೀನು ದಾಖಲೆಗಳು ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಚಿಕ್ಕಬಳ್ಳಾಪುರದಲ್ಲಿ ತಮ್ಮ ಸೋಲಿನ ಕಹಿ ನೆನಪು ಮಾಡಿಕೊಂಡ ಸಚಿವ ಎಂ.ಟಿ.ಬಿ ನಾಗರಾಜ್